ADVERTISEMENT

ಪ್ರಧಾನಿ, ಗೃಹ ಸಚಿವರ ಫೋಟೊ ತಿರುಚಿ ಪೋಸ್ಟ್; ಮಾಜಿ ಮೇಯರ್ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 11:59 IST
Last Updated 19 ಅಕ್ಟೋಬರ್ 2020, 11:59 IST

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೊವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮಾಜಿ ಮೇಯರ್ ಶಹತಾಜ್ ಖಾನಂ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅವಹೇಳನಕಾರಿಯಾಗಿ ಫೋಟೊವನ್ನು ತಿರುಚಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಮಾಜಿ ಮೇಯರ್ ಶಹತಾಜ್ ಖಾನಂ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಕಿರಣ್ ಆರಾಧ್ಯ ಎಂಬುವರು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ಈಗ ದಾಖಲಾಗಿದೆ.

’ಮೂವರೂ ರಾಜಕೀಯ ನಾಯಕರ ಫೋಟೊ ತಿರುಚಿ ಸಾರ್ವಜನಿಕ ವಲಯದಲ್ಲಿ ಅವಹೇಳನ ಮಾಡಲಾಗಿದೆ’ ಎಂದೂ ಕಿರಣ್ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.