ADVERTISEMENT

ಕೋವಿಡ್‌: ನಿತ್ಯ 150ಕ್ಕೂ ಅಧಿಕ ಕರೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:10 IST
Last Updated 26 ಫೆಬ್ರುವರಿ 2020, 19:10 IST

ಬೆಂಗಳೂರು:ಕೋವಿಡ್ (ಕೊರೊನಾ) ಭೀತಿ ಹಿನ್ನೆಲೆಯಲ್ಲಿಆರೋಗ್ಯ ಇಲಾಖೆಯ ಸಹಾಯವಾಣಿಗೆ (104) ನಿತ್ಯ 150ಕ್ಕೂ ಅಧಿಕ ಮಂದಿ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಈವರೆಗೆ 5,647 ಮಂದಿ ಕರೆ ಮಾಡಿ ಸಂದೇಹ ನಿವಾರಿಸಿಕೊಂಡಿದ್ದಾರೆ.

ಚೀನಾದಲ್ಲಿ ಕಾಣಿಸಿಕೊಂಡ ಈ ಸೋಂಕು ಹಲವು ದೇಶಗಳಿಗೆ ಹರಡಿದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ, ಕರೆ ಮಾಡಿದವರಿಗೆಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುವ ಜತೆಗೆ ಅಗತ್ಯ ಮಾಹಿತಿ ನೀಡುತ್ತಿದೆ. ಬುಧವಾರ ಒಂದೇ ದಿನ 176 ಮಂದಿ ಕರೆ ಮಾಡಿದ್ದಾರೆ. ಈವರೆಗೆ198 ಮಂದಿಯ ರಕ್ತದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಯಾರಲ್ಲೂ ಕೋವಿಡ್‌ ವೈರಸ್‌ ಪತ್ತೆಯಾಗಿಲ್ಲ.

ಕೋವಿಡ್‌ ಸೋಂಕು ಪ್ರಕರಣ ಅಧಿಕ ವರದಿಯಾದ ದೇಶಗಳಿಂದ ಬಂದವರಲ್ಲಿ 352 ಮಂದಿಯ ಮೇಲೆ ನಿಗಾ ಇಡಲಾಗಿದೆ. ಅದರಲ್ಲಿ 258 ಮಂದಿ ವಿವಿಧೆಡೆ ಮನೆಗಳಲ್ಲಿ ನೆಲೆಸಿದ್ದು, ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. 207 ಮಂದಿ ರಕ್ತದ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದೆ.4 ಚೀನಿಯರು ತಮ್ಮ ದೇಶಕ್ಕೆ ತೆರಳಿದ್ದಾರೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33,377 ಮಂದಿಯನ್ನು ಥರ್ಮಲ್ಸ್ಕ್ಯಾನಿಂಗ್‍ಗೆ ಒಳಪಡಿಸಲಾಗಿದೆ. ಅದರಲ್ಲಿ 180 ಮಂದಿ ಚೀನಾ ಹಾಗೂ 3 ಮಂದಿ ವುಹಾನ್ ನಗರದಿಂದ ಬಂದವರಾಗಿದ್ದಾರೆ. ಈವರೆಗೆ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.