ADVERTISEMENT

ಹಗಲು ಸೇವಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:54 IST
Last Updated 27 ಮೇ 2021, 21:54 IST

ಬೆಂಗಳೂರು: ಮಲ್ಲೇಶ್ವರದ ಪ್ರಾಥಮಿಕ ಆರೈಕೆ ಕೇಂದ್ರ, ಬೆಳವಲ್ಲ್ ಫೌಂಡೇಷನ್, ಇತರ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ಸೇವಾ ಸಮಿತಿ ಸಭಾಂಗಣದಲ್ಲಿ ಹಗಲು ಸೇವಾ ಕೇಂದ್ರ ಆರಂಭವಾಗಿದೆ.

40 ಹಾಸಿಗೆಗಳ ಈ ಕೇಂದ್ರದಲ್ಲಿ ಆಮ್ಲಜನಕ, ಔಷಧ, ಆತ್ಮಸ್ಥೈರ್ಯ ಮತ್ತು ಜಾಗೃತಿ ಬಗ್ಗೆ ಮಾಹಿತಿ ನೀಡುವ ಆಪ್ತ ಸಮಾಲೋಚಕರ ತಂಡ ಈ ಸೇವಾ ಕೇಂದ್ರದಲ್ಲಿ ಇದೆ. ಕೋವಿಡ್ 3ನೇ ಅಲೆ, ಕಪ್ಪು ಶಿಲೀಂದ್ರ ಹಾಗೂ ಇತರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ದೂರವಾಣಿ ಸಂಖ್ಯೆ 96867–00385ಗೆ ಕರೆ ಮಾಡಬಹುದು ಎಂದು ವಿವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.