ADVERTISEMENT

‘ಹೆಚ್ಚು ಹಣ: ಆಸ್ಪತ್ರೆ ವಿರುದ್ಧ ಕೈಗೊಂಡ ಕ್ರಮ ಏನು’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 2:51 IST
Last Updated 26 ಅಕ್ಟೋಬರ್ 2021, 2:51 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್‌ ಸೋಂಕಿತರಿಂದ ಹೆಚ್ಚು ಹಣ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.

‘ರಾಜ್ಯ ಸರ್ಕಾರದ ಇತ್ತೀಚಿನ ಪ್ರಮಾಣ ಪತ್ರದ ಪ್ರಕಾರ ಕೆಲ ಆಸ್ಪತ್ರೆಗಳು ಹೆಚ್ಚುವರಿ ಹಣವನ್ನು ಸೋಂಕಿತರಿಂದ ಪಡೆದಿವೆ. ಆದರೆ, ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮ ಮತ್ತು ರೋಗಿಗಳಿಗೆ ಹಣ ಮರಳಿಸಿದ ಬಗ್ಗೆ ವಿವರ ಸಲ್ಲಿಸಿಲ್ಲ’ ಎಂದು ವಕೀಲ ಶ್ರೀಧರ್ ಪ್ರಭು ಹೇಳಿದರು.

‘ಮರು ಪಾವತಿಗೆ ಸಂಬಂಧಿಸಿದ ಮಾಹಿತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸಬೇಕು’ ಎಂದು ಮುಖ್ಯ ನ್ಯಾಯಮುರ್ತಿ ಋತು ರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ಬಿಬಿಎಂಪಿಗೆ ತಿಳಿಸಿತು. ‘ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮತ್ತು ಹಣ ವಾಪಸ್ ಕೊಡಿಸಿದ ಬಗ್ಗೆ ವಿವರವನ್ನು ಪೀಠಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.