ADVERTISEMENT

ವಿದ್ಯುತ್‌ ಶಕ್ತಿ ಕಾಯ್ದೆಗೆ ತಿದ್ದುಪಡಿ ಬೇಡ: ಸಿಪಿಎಂ

​ಪ್ರಜಾವಾಣಿ ವಾರ್ತೆ
Published 31 ಮೇ 2020, 21:29 IST
Last Updated 31 ಮೇ 2020, 21:29 IST

ಬೆಂಗಳೂರು: ‘ವಿದ್ಯುತ್‌ ಶಕ್ತಿ ತಿದ್ದುಪಡಿ ಕಾಯ್ದೆ–2020 ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ಉದ್ದೇಶ ಹೊಂದಿದೆ. ಇದನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಬಾರದು’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಆಗ್ರಹಿಸಿದೆ.

‘ರಾಜ್ಯ ಸರ್ಕಾರದ ಹಾಲಿ ವಿದ್ಯುತ್ ನೀತಿಗಳಿಂದ ಕೋಟ್ಯಂತರ ಕೃಷಿ ಪಂಪ್‌ಸೆಂಟ್‌ಗಳು, ಕುಟೀರ ಜ್ಯೋತಿ ಹಾಗೂ ಭಾಗ್ಯಜ್ಯೋತಿ ಯೋಜನೆಗಳಿಂದ ಬಡ ಕುಟುಂಬಗಳು, ಸಣ್ಣ ಕೈಗಾರಿಕೆಗಳು ಉಚಿತ ಹಾಗೂ ಸಹಾಯಧನದ ಆಧಾರದಲ್ಲಿ ವಿದ್ಯುತ್ ಪಡೆಯುತ್ತಿವೆ. ವಿದ್ಯುತ್ ರಂಗವನ್ನು ಖಾಸಗೀಕರಣ ಮಾಡಿದರೆ ಇವರೆಲ್ಲರೂ ಈ ಪ್ರಯೋಜನ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆತಂಕ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ, ಸರಬರಾಜು ಹಾಗೂ ವಿತರಣೆ ಮಾಡುತ್ತಿರುವ ಕಂಪನಿಗಳು ಮತ್ತು ಅವುಗಳ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿಯೂ ಕಾರ್ಪೊರೇಟ್ ಕಂಪನಿಗಳ ವಶವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.