ADVERTISEMENT

ಬೆಂಗಳೂರು: ವಿದ್ಯಾರ್ಥಿಗಳಿಗೆ ಸಿಪಿಆರ್‌ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 22:01 IST
Last Updated 2 ಜುಲೈ 2025, 22:01 IST
ಮಣಿಪಾಲ್‌ ಹಾಸ್ಪಿಟಲ್ಸ್‌ ವತಿಯಿಂದ ವಿದ್ಯಾರ್ಥಿಗಳಿಗೆ ಸಿಪಿಆರ್‌ ತರಬೇತಿ ನೀಡಲಾಯಿತು
ಮಣಿಪಾಲ್‌ ಹಾಸ್ಪಿಟಲ್ಸ್‌ ವತಿಯಿಂದ ವಿದ್ಯಾರ್ಥಿಗಳಿಗೆ ಸಿಪಿಆರ್‌ ತರಬೇತಿ ನೀಡಲಾಯಿತು   

ಬೆಂಗಳೂರು: ‘ಹೃದಯ, ಶ್ವಾಸಕೋಶದ ಪುನರುಜ್ಜೀವನ (ಸಿಪಿಆರ್‌) ಕೌಶಲವನ್ನು ಯುವಕರು ಅರಿಯುವುದರಿಂದ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಾರಂಭಿಕ ಪ್ರಕ್ರಿಯೆಯನ್ನು ನಡೆಸಿದರೆ, ಹಲವು ಜೀವಗಳನ್ನು ಉಳಿಸಬಹುದು’ ಎಂದು ಮಣಿಪಾಲ್‌ ಆಸ್ಪತ್ರೆ ನಿರ್ದೇಶಕ ಡಾ. ನಿರಂಜನ್ ರೈ ಹೇಳಿದರು.

‌ಯುವ ಜನರಲ್ಲಿ ಹಠಾತ್ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಮಣಿಪಾಲ್‌ ಹಾಸ್ಪಿಟಲ್ಸ್‌ ವತಿಯಿಂದ 200 ವಿದ್ಯಾರ್ಥಿಗಳಿಗೆ ಸಿಪಿಆರ್‌ ತರಬೇತಿ ಮೂಲಕ ತಿಳಿಸಿಕೊಡಲಾಯಿತು.

‘ಸಿಪಿಆರ್‌ ಅರಿಯುವುದರಿಂದ ತುರ್ತು ಸಂದರ್ಭದಲ್ಲಿ ಹೃದಯದ ಸಮಸ್ಯೆಗೆ ಒಳಗಾದವರನ್ನು ರಕ್ಷಿಸಬಹುದಾಗಿದೆ’ ಎಂದು ನಿರಂಜನ್‌ ಹೇಳಿದರು.

ADVERTISEMENT

‘ಯುವ ಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿದ್ದು,  ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಅಗತ್ಯವಾದ ಕೌಶಲಗಳೊಂದಿಗೆ ಅವರನ್ನು ಸಜ್ಜುಗೊಳಿಸಬೇಕು’ ಎಂದು ಮಣಿಪಾಲ್‌ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ  ಡಾ. ಹರ್ಷಿತಾ ಶ್ರೀಧರ್ ತಿಳಿಸಿದರು.

‘ಇತ್ತೀಚಿನ ಅಧ್ಯಯನಗಳ ಪ್ರಕಾರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಜಡ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚಿದ ಒತ್ತಡ ಇದಕ್ಕೆ ಕಾರಣ. ಹೃದಯ ಸಂಬಂಧಿ ಘಟನೆಗಳ ಸಮಯದಲ್ಲಿ ತಕ್ಷಣದ ಪ್ರತಿಕ್ರಿಯೆ ನಿರ್ಣಾಯಕವಾಗಿದೆ. ಇದರ ಪ್ರಾಮುಖ್ಯವನ್ನು ಗುರುತಿಸಿದ ಮಣಿಪಾಲ್ ಆಸ್ಪತ್ರೆಯ ತಂಡ, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ಜ್ಞಾನ ಮತ್ತು ಕೌಶಲ ತಿಳಿಸಿಕೊಡುತ್ತಿದೆ’ ಎಂದು ವೈದ್ಯರು ಹೇಳಿದರು.

ರೋಟರಿ ಜಿಲ್ಲೆ 3192ರ ಜಿಲ್ಲಾ ಗವರ್ನರ್ ಪ್ರೊ. ಎಲಿಜಬೆತ್ ಚೆರಿಯನ್, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಶರತ್ ಚಂದ್ರ, ಉತ್ತರ ವಿಭಾಗದ ಡಿಸಿಪಿ  ಸೈದುಲು ಅಡವತ್, ಬೆಂಗಳೂರು ನಗರದ ಮಾಜಿ ಪೊಲೀಸ್‌ ಆಯುಕ್ತ  ಭಾಸ್ಕರ್ ರಾವ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.