ADVERTISEMENT

ಹಣ ಕೇಳಿದ್ದಕ್ಕೆ ಕಾದ ಎಣ್ಣೆ ಎರಚಿದರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:59 IST
Last Updated 1 ಅಕ್ಟೋಬರ್ 2019, 19:59 IST

ಬೆಂಗಳೂರು: ತಳ್ಳುಗಾಡಿಯಲ್ಲಿದ್ದ ರೈಸ್‌ ಬಾತ್‌ ತಿಂದಿದ್ದ ನಾಲ್ವರು ದುಷ್ಕರ್ಮಿಗಳು, ಹಣ ಕೇಳಿದ್ದಕ್ಕಾಗಿ ತಳ್ಳುಗಾಡಿಯ ಮಾಲೀಕ ಲಕ್ಷ್ಮಿನಾರಾಯಣ ಮೇಲೆಯೇ ಕಾದ ಎಣ್ಣೆ ಎರಚಿ ಪರಾರಿಯಾಗಿದ್ದಾರೆ. ಹೊಸಕೆರೆಹಳ್ಳಿಯ 100 ಅಡಿ ಹೊರರಸ್ತೆಯ ಕೆಇಬಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.ಲಕ್ಷ್ಮಿನಾರಾಯಣ ಅವರ ಮೈ ಮೇಲೆ ಗಾಯಗಳಾಗಿದ್ದು, ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನೀಡಿರುವ ಹೇಳಿಕೆ ಆಧರಿಸಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ಜನಶಕ್ತಿನಗರದ ಲಕ್ಷ್ಮಿನಾರಾಯಣ ಹಾಗೂ ಅವರ ಕುಟುಂಬದವರು, ತಳ್ಳುಗಾಡಿ ಇಟ್ಟುಕೊಂಡು ತಿಂಡಿ ಹಾಗೂ ಊಟ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಇದೇ 29ರಂದು ಸಂಜೆ ತಳ್ಳುಗಾಡಿ ಬಳಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ರೈಸ್‌ ಬಾತ್‌ ತಿಂದಿದ್ದರು. ಹಣ ನೀಡದೆ ವಾಪಸ್‌ ಹೋಗುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಲಕ್ಷ್ಮಿನಾರಾಯಣ, ಹಣ ನೀಡುವಂತೆ ವಿನಂತಿಸಿದ್ದರು.’

ADVERTISEMENT

‘ಲಕ್ಷ್ಮಿನಾರಾಯಣ ಜೊತೆ ಜಗಳ ತೆಗೆದಿದ್ದ ದುಷ್ಕರ್ಮಿಗಳು, ‘ನಾವು ಯಾರು ಗೊತ್ತಾ? ಹಣ ಕೇಳುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಳ್ಳುಗಾಡಿಯ ಬಾಣಲೆಯಲ್ಲಿದ್ದ ಕಾದ ಎಣ್ಣೆಯನ್ನು ಎರಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.