ADVERTISEMENT

ಐಎಸ್ ನಂಟು: ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:49 IST
Last Updated 19 ಆಗಸ್ಟ್ 2020, 19:49 IST

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದಡಿ ಬಂಧಿಸಲಾಗಿರುವ ವೈದ್ಯಕೀಯ ವಿದ್ಯಾರ್ಥಿ ಅಬ್ದುಲ್ ರೆಹಮಾನ್‍ಗೆ ಸಂಬಂಧಪಟ್ಟ ವಿಚಾರಣೆಯನ್ನು ಎನ್‍ಐಎ ಅಧಿಕಾರಿಗಳು ಮುಂದುವರಿಸಿದ್ದಾರೆ.

ರೆಹಮಾನ್ ಜೊತೆಗೆ ಸಂಪರ್ಕದಲ್ಲಿದ್ದ ನಗರದ ಐವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಅವರಿಂದ ಹಲವು ಮಾಹಿತಿ ಪಡೆದಿದ್ದಾರೆ. ಐವರಲ್ಲಿ ಇಬ್ಬರು ಬೇರೆ ಸಂದರ್ಭಗಳಲ್ಲಿ ರೆಹಮಾನ್‍ನನ್ನು ಸಂಪರ್ಕಿಸಿದ್ದರು. ಉಳಿದ ಮೂವರು ಆರೋಪಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

2014ರಲ್ಲಿ ಸಿರಿಯಾಗೆ ಹೋಗಿ ಬಂದಿರುವುದಾಗಿ ಅಬ್ದುಲ್ ರೆಹಮಾನ್‌ ಹೇಳಿದ್ದು, ಸಿರಿಯಾ ಸಂಪರ್ಕ ಸಿಕ್ಕಿದ್ದು ಹೇಗೆ? ಅಲ್ಲಿಗೆ ಭೇಟಿ ನೀಡಲು ಕಾರಣವೇನು? ಎಂಬ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ADVERTISEMENT

ವೈದ್ಯಕೀಯ ವಿದ್ಯಾರ್ಥಿಯಾಗಿರುವ ಈತನಿಗೆ ದೇಶದಲ್ಲಿರುವ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರುವ ಅನುಮಾನವಿದೆ. ಈ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.