ADVERTISEMENT

ಮೊಬೈಲ್ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 20:04 IST
Last Updated 19 ಆಗಸ್ಟ್ 2020, 20:04 IST

ಬೆಂಗಳೂರು: ರಸ್ತೆಯಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಾ ಒಂಟಿಯಾಗಿ ಸಂಚರಿಸುವವರ ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಸಲ್ಮಾನ್ ಖಾನ್ (26) ಹಾಗೂ ಸುಭಾಷ್‍ನಗರದ ಸೈಫ್ ಶರೀಫ್ (25) ಬಂಧಿತರು. ಆರೋಪಿಗಳಿಂದ ₹4 ಲಕ್ಷ ಬೆಲೆಬಾಳುವ 20ಕ್ಕೂ ಹೆಚ್ಚು ಸ್ಮಾರ್ಟ್‍ಫೋನ್‍ಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಬಂಡೇಪಾಳ್ಯ, ಎಚ್‍ಎಸ್‍ಆರ್ ಬಡಾವಣೆ, ಹುಳಿಮಾವು, ಬೊಮ್ಮನಹಳ್ಳಿ, ಬೇಗೂರು ಹಾಗೂ ಮಡಿವಾಳ ವ್ಯಾಪ್ತಿಗಳಲ್ಲಿ ಮೊಬೈಲ್ ಕಳವು ಮಾಡುತ್ತಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.