ADVERTISEMENT

ಸಾಲದ ಹೆಸರಿನಲ್ಲಿ ವಂಚನೆ: ಎರಡು ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 8:33 IST
Last Updated 6 ಮೇ 2021, 8:33 IST
ಹರಿ ಗೋಪಾಲಕೃಷ್ಣ ನಾಡರ್
ಹರಿ ಗೋಪಾಲಕೃಷ್ಣ ನಾಡರ್    

ಬೆಂಗಳೂರು: ಕೋಟ್ಯಂತರ ರೂಪಾಯಿ ಸಾಲ ಕೊಡಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಎ. ಹರಿ ನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಎಂಬಾತನನ್ನು ಬಂಧಿಸಿದ್ದಾರೆ.

ಕೇರಳದ ಹರಿ, ತನ್ನದೇ ರಾಜ್ಯದ ರಂಜಿತ್ ಪಣಿಕ್ಕರ್ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿದ್ದ. ಆತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ‌.

ಬಂಧಿತ ಆರೋಪಿಯಿಂದ ಎರಡು ಕೋಟಿ‌ ರೂಪಾಯಿ ಮೌಲ್ಯದ ಚಿನ್ನಾಭರಣ, ₹ 8.75 ಲಕ್ಷ ನಗದು ಜಪ್ತಿ‌ ಮಾಡಲಾಗಿದೆ ಎಂದೂ ಹೇಳಿದ್ದಾರೆ.

ಆರೋಪಿಗಳು, ನಗರದ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಎಂಬುವರಿಗೆ ₹360 ಕೋಟಿ ಸಾಲ‌ ಕೊಡಿಸುವ ಆಮಿಷವೊಡ್ಡಿದ್ದರು. ಹಲವು ಬಾರಿ ಐಷಾರಾಮಿ ಹೋಟೆಲಗಳಲ್ಲಿ ಉದ್ಯಮಿಯನ್ನು ಭೇಟಿಯಾಗಿದ್ದರು.

ಸಾಲಕ್ಕೆ ಸೇವಾ ಶುಲ್ಕವೆಂದು ₹7.20 ಕೋಟಿ ಪಡೆದುಕೊಂಡಿದ್ದರು. ಅದಾದ ನಂತರ ಆರೋಪಿಗಳು ಸಾಲ ಕೊಡಿಸದೇ ನಾಪತ್ತೆಯಾಗಿದ್ದರು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.