ADVERTISEMENT

ಬೆಂಗಳೂರು: ₹2,000 ಮೊಬೈಲ್‌ಗಾಗಿ ಕುತ್ತಿಗೆಗೆ ಇರಿತ, ದುಷ್ಕರ್ಮಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:37 IST
Last Updated 16 ಸೆಪ್ಟೆಂಬರ್ 2022, 4:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ರಂಜಿತ್ ಎಂಬುವವರ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ದುಷ್ಕರ್ಮಿಗಳು, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

‘ಥಣಿಸಂದ್ರದ ನಿವಾಸಿ ರಂಜಿತ್, ಬಾರ್ ಬೆಂಡರ್ ಆಗಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಂಜಿತ್ ಅವರು ಸಂಪಿಗೆಹಳ್ಳಿಯ ರೈಲ್ವೆ ಫ್ಯಾರಲಲ್ (ಆರ್‌.‍ಪಿ) ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಇಬ್ಬರು ಆರೋಪಿಗಳು, ಮೊಬೈಲ್ ಹಾಗೂ ನಗದು ನೀಡು ವಂತೆ ಒತ್ತಾಯಿಸಿದ್ದರು. ಅದನ್ನು ರಂಜಿತ್ ವಿರೋಧಿಸಿದ್ದರು. ಸಿಟ್ಟಾದ ಆರೋಪಿಗಳು, ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ನಂತರ, ₹ 2,000 ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.