ADVERTISEMENT

ಸಿಟಿ ಮಾರ್ಕೆಟ್‌ನಲ್ಲಿ ಸುಲಿಗೆ: ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:41 IST
Last Updated 12 ಜನವರಿ 2023, 20:41 IST
ಆರೋಪಿಗಳಿಂದ ಜಪ್ತಿ ಮಾಡಲಾದ ವಾಹನಗಳು ಹಾಗೂ ಮಾರಕಾಸ್ತ್ರಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ವಾಹನಗಳು ಹಾಗೂ ಮಾರಕಾಸ್ತ್ರಗಳು   

ಬೆಂಗಳೂರು: ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಮಟನ್ ಮಾರುಕಟ್ಟೆ ಬಳಿ ಜನರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಮಹಮ್ಮದ್ ಆಲೀಂ (32), ರಿಜ್ವಾನ್ ಖಾನ್ (33), ವಾಸೀಮ್ ಅಹ್ಮದ್ ಶೇಖ್ (27), ಶಫೀ ಉಲ್ಲಾ (32), ಮಹಮ್ಮದ್ ಫರಸ್ (32) ಹಾಗೂ ತಬ್ರೇಜ್ (22) ಬಂಧಿತರು. ಇವರಿಂದ 2 ಚಾಕು, ದೊಣ್ಣೆ, ಕಬ್ಬಿಣದ ರಾಡ್, 8 ಮೊಬೈಲ್, 6 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮ್ಮದೇ ತಂಡ ಕಟ್ಟಿಕೊಂಡಿದ್ದ ಆರೋಪಿಗಳು, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ಪ್ರಮುಖ ಆರೋಪಿಗಳು ಎನ್ನಲಾದ ಮಹಮ್ಮದ್ ಆಲೀಂ ಹಾಗೂ ರಿಜ್ವಾನ್ ಖಾನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮಾರುಕಟ್ಟೆ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಸಾರ್ವಜನಿಕರನ್ನು ಅಡ್ಡಗಟ್ಟುತ್ತಿದ್ದರು. ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆಯೊಡ್ಡುತ್ತಿದ್ದರು. ಮೊಬೈಲ್, ನಗದು, ವಾಹನಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗು
ತ್ತಿದ್ದರು. ಇವರ ಕೃತ್ಯದ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಆರೋಪಿಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.