ADVERTISEMENT

ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ

ಸರ್ವೇಕ್ಷಣಾ ತಂಡ ರಚನೆ * ಬಿಎಲ್‌ಒಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:13 IST
Last Updated 31 ಮಾರ್ಚ್ 2020, 15:13 IST

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ತಗುಲಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಅಂತಹವರ ಸಂಪರ್ಕಕ್ಕೆ ಬಂದವರ ಪತ್ತೆಗೆ ಸರ್ವೇಕ್ಷಣೆ ನಡೆಸಲುಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಒಳಗೊಂಡ ‘ಕೋವಿಡ್‌–19 ಸರ್ವೇಕ್ಷಣಾ ತಂಡ’ಗಳನ್ನು (ಸಿಎಸ್‌ಟಿ) ಪಾಲಿಕೆ ರಚಿಸಿದೆ.

ಕೊರೊನಾ ಸೋಂಕು ಹೊಂದಿರುವ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿರುವವರ ಜೊತೆ ಬೆರೆತ ಕಡಿಮೆ ಅಪಾಯದ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಈ ಕಾರ್ಯ ಪಾಲಿಕೆ ವ್ಯಾಪ್ತಿಗೊಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಈ ಕಾರ್ಯಕ್ಕಾಗಿ ಒಟ್ಟು 1,328 ತಂಡಗಳನ್ನು ರಚಿಸಲಾಗಿದ್ದು ಒಟ್ಟು 8,146 ಬಿಎಲ್‌ಒಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಏ. 2ರಿಂದ ಆಯ್ದ ಸ್ಥಳಗಳಲ್ಲಿ ಸಿಎಸ್‌ಟಿ ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 4 ಕಡೆ 62 ತಂಡಗಳಿಗೆ(376 ಮಂದಿ), ಕೆ.ಆರ್.ಪುರದಲ್ಲಿ 4 ಕಡೆ 73 ತಂಡಗಳಿಗೆ(437 ಮಂದಿ), ಬ್ಯಾಟರಾಯನಪುರದಲ್ಲಿ 3 ಕಡೆ 66 ತಂಡಗಳಿಗೆ(397 ಮಂದಿ), ಯಶವಂತಪುರದಲ್ಲಿ 4 ಕಡೆ 75 ತಂಡಗಳಿಗೆ(461 ಮಂದಿ), ಆರ್.ಆರ್.ನಗರದಲ್ಲಿ 4 ಕಡೆ 60 ತಂಡಗಳಿಗೆ(381 ಮಂದಿ), ದಾಸರಹಳ್ಳಿಯಲ್ಲಿ 4ಕಡೆ 67ತಂಡಗಳಿಗೆ (409 ಮಂದಿ), ಮಹಾಲಕ್ಷ್ಮೀ ಲೇಔಟ್‌ನಲ್ಲಿ 2ಕಡೆ 38ತಂಡಗಳಿಗೆ (270 ಮಂದಿ), ಮಲ್ಲೇಶರಂನಲ್ಲಿ 2ಕಡೆ 35ತಂಡಗಳಿಗೆ (231 ಮಂದಿ), ಹಬ್ಬಾಳದಲ್ಲಿ 1 ಕಡೆ 39ತಂಡಗಳಿಗೆ (246 ಮಂದಿ), ಪುಲಕೇಶಿನಗರದಲ್ಲಿ 2ಕಡೆ 36ತಂಡಗಳಿಗೆ (223 ಮಂದಿ), ಸರ್ವಜ್ಞನಗರದಲ್ಲಿ 2ಕಡೆ 50 ತಂಡಗಳಿಗೆ (330 ಮಂದಿ), ಸಿ.ವಿ.ರಾಮನ್ ನಗರದಲ್ಲಿ 2 ಕಡೆ 41 ತಂಡಗಳಿಗೆ(251 ಮಂದಿ), ಶಿವಾಜಿನಗರದಲ್ಲಿ 2 ಕಡೆ 31 ತಂಡಗಳಿಗೆ(193 ಮಂದಿ), ಶಾಂತಿನಗರದಲ್ಲಿ 2 ಕಡೆ 33 ತಂಡಗಳಿಗೆ(195 ಮಂದಿ), ಗಾಂಧಿನಗರದಲ್ಲಿ 2 ಕಡೆ, 38 ತಂಡಗಳಿಗೆ (23 ಮಂದಿ), ರಾಜಾಜಿನಗರದಲ್ಲಿ 2 ಕಡೆ 33 ತಂಡಗಳಿಗೆ(197 ಮಂದಿ), ಗೋವಿಂದರಾಜನಗರದಲ್ಲಿ 2 ಕಡೆ 44 ತಂಡಗಳಿಗೆ(267 ಮಂದಿ), ವಿಜಯನಗರದಲ್ಲಿ 2 ಕಡೆ 49 ತಂಡಗಳಿಗೆ(295 ಮಂದಿ), ಚಾಮರಾಜಪೇಟೆ 2 ಕಡೆ 33 ತಂಡಗಳಿಗೆ(219 ಮಂದಿ), ಚಿಕ್ಕಪೇಟೆಯಲ್ಲಿ 2 ಕಡೆ 39 ತಂಡಗಳಿಗೆ(223 ಮಂದಿ), ಬಸವನಗುಡಿಯಲ್ಲಿ 2 ಕಡೆ 38 ತಂಡಗಳಿಗೆ(236 ಮಂದಿ), ಪದ್ಮನಾಭನಗರದಲ್ಲಿ 2 ಕಡೆ 44 ತಂಡಗಳಿಗೆ(282 ಮಂದಿ), ಬಿ.ಟಿ.ಎಂ ಲೇಔಟ್‌ನಲ್ಲಿ 2 ಕಡೆ 40 ತಂಡಗಳಿಗೆ(247 ಮಂದಿ), ಜಯನಗರದಲ್ಲಿ 2 ಕಡೆ 35 ತಂಡಗಳಿಗೆ(211 ಮಂದಿ), ಮಹದೇವಪುರದಲ್ಲಿ 3 ಕಡೆ 81 ತಂಡಗಳಿಗೆ(466 ಮಂದಿ), ಬೊಮ್ಮನಹಳ್ಳಿಯಲ್ಲಿ 3 ಕಡೆ 59 ತಂಡಗಳಿಗೆ(370 ಮಂದಿ), ಬೆಂಗಳೂರು ದಕ್ಷಿಣದಲ್ಲಿ 3 ಕಡೆ 89 ತಂಡಗಳಿಗೆ(520 ಮಂದಿ) ಸೇರಿದಂತೆ ಒಟ್ಟು 1328 ತಂಡಗಳಿಗೆ(8,146 ಮಂದಿ) ತರಬೇತಿ ಏರ್ಪಡಿಸಲಾಗಿದೆ.

ADVERTISEMENT

ತರಬೇತಿ ನೀಡುವ ಕುರಿತ ಆದೇಶವನ್ನು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಾಲಿಕೆ ಕಂದಾಯ ಅಧಿಕಾರಿಗಳು/ ಸಹಾಯ ಕಂದಾಯ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಜಾರಿ ಮಾಡಲಾಗಿದೆ. ಈ ತಂಡಗಳಿಗೆ ಬಿಎಲ್‌ಒಗಳನಿಯೋಜನೆಯ ಆದೇಶ ಪಾಲಿಕೆಯ ವೆಬ್‌ಸೈಟ್‌ನಲ್ಲಿ (www.bbmp.gov.in) ಲಭ್ಯವಿದೆ. ಬಿಎಲ್‌ಒಗಳು ಅದನ್ನು ಪರಿಶೀಲಿಸಿ, ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಸೂಚಿಸಿದ್ದಾರೆ.

ಗರ್ಭವತಿ ಮಹಿಳೆಯರು ಮತ್ತು ಅಂಗವಿಕಲರಿಗೆ ಮಾತ್ರ ತರಬೇತಿಯಿಂದ ವಿನಾಯಿತಿ ನೀಡಲಾಗಿದೆ. ತರಬೇತಿಗೆ ಹಾಜರಾಗದ ಬಿಎಲ್‌ಒಗಳ ವಿರುದ್ಧ 1897ರ ಸಾಂಕ್ರಾಮಿಕ ರೋಗ (ತಡೆ) ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಆಯಕ್ತರು ಎಚ್ಚರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.