ರಾಜರಾಜೇಶ್ವರಿನಗರ: ನಾಗದೇವನಹಳ್ಳಿಯಲ್ಲಿ ಕರಿಯಮ್ಮ, ಬೇವಿನಹಳ್ಳಮ್ಮ ದೇವಿ ಉತ್ಸವ, ಮೆರವಣಿಗೆ ಹಾಗೂ ವಿಶೇಷ ಪೂಜೆ ನಡೆದವು.
ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಉತ್ಸವದಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹೆಣ್ಣು ಮಕ್ಕಳು ತಂಬಿಟ್ಟು, ಬೆಲ್ಲದ ಆರತಿ ಎತ್ತಿ, ಮೊಸರನ್ನ ನೈವೇದ್ಯ ನೆರವೇರಿಸಿದರು.
ಯುವ ಮುಖಂಡ ಎನ್. ಸಿ. ಕುಮಾರ್ ಮಾತನಾಡಿ, ಈ ಉತ್ಸವವನ್ನು ಗ್ರಾಮದ ಹಿರಿಯರು ಮತ್ತು ಭೂತಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಲವು ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಭೂತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ, ಜೆ. ದೊಡ್ಡಯ್ಯ, ರಾಮಣ್ಣ, ಪೂಜಾರಿ ತಿಮ್ಮಯ್ಯ, ಕಾಟಪ್ಪ, ರಾಜಣ್ಣ, ಹೊಸ ಮನೆ ಶೇಷಪ್ಪ, ಮೇಸ್ತ್ರಿ ದೊಡ್ಡಯ್ಯ, ಕೌಲಪ್ಪ, ಚಿಕ್ಕಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.