ADVERTISEMENT

‘ನಾಗರಿಕತೆ–ಸಂಸ್ಕೃತಿ ಸಂಗಮವೇ ಬದುಕು’

ಐವರು ಸಾಧಕರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:12 IST
Last Updated 15 ಸೆಪ್ಟೆಂಬರ್ 2019, 20:12 IST
ಕಾರ್ಯಕ್ರಮದಲ್ಲಿ ವೀರೇಶ್ ಕಿತ್ತೂರ, ಡಾ. ಓ.ಎಲ್ ನಾಗಭೂಷಣ ಸ್ವಾಮಿ, ವೈಜಯಂತಿ ಕಾಶಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತು ಯಲ್ಲವ್ವ ದುರ್ಗಪ್ಪ ರೊಡ್ಡಪ್ಪನವರ ಅವರಿಗೆ ‘ಸಂಸ್ಕೃತಿ ಸಂಗಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸಚಿವ ಡಿ.ವಿ. ಸದಾನಂದ ಗೌಡ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ವಿ. ಸೋಮಣ್ಣ, ಪ್ರತಿಷ್ಠಾನದ ಅಧ್ಯಕ್ಷ ಸಿ. ಸೋಮಶೇಖರ ಮತ್ತು ಸರ್ವಮಂಗಳ ಇದ್ದರು - –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಾಗರಿಕತೆ ಮತ್ತು ಸಂಸ್ಕೃತಿಯ ಸಂಗಮವೇ ಬದುಕು. ಅಂಥ ಬದುಕನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳಬೇಕು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸರ್ವಮಂಗಳಾ ಸಾಹಿತ್ಯ ಸೇವಾ ಟ್ರಸ್ಟ್‌ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಸ್ಕೃತಿ ಎನ್ನುವುದು ಪರಂಪರೆ. ಇತಿಹಾಸ ಉಳ್ಳದ್ದು. ನಾಗರಿಕತೆ ಎನ್ನುವುದು ದೈನಂದಿನ ಸೌಲಭ್ಯಗಳಿಗಾಗಿ ಮಾಡಿಕೊಂಡಿರುವ ವ್ಯವಸ್ಥೆ’ ಎಂದರು.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ‘ನಗು ಮತ್ತು ಸಮಯ ಜಗತ್ತಿನ ಎರಡು ಅದ್ಭುತಗಳು. ನಗುವಿನಿಂದ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ನನ್ನ ಬಳಿ ಬಂದವರಿಗೆ ನಗುತ್ತಾ ಮಾತನಾಡಿಸುತ್ತೇನೆ. ಕೆಲಸ ಆಗದಿದ್ದರೂ ಚಿಂತಿಸುವುದಿಲ್ಲ. ಮಂತ್ರಿಗಳು ಖುಷಿ
ಯಿಂದ ಮಾತನಾಡಿದರೂ ಸಾಕು ಎಂದುಕೊಳ್ಳುತ್ತಾರೆ’ ಎಂದರು.

ADVERTISEMENT

ಐವರು ಸಾಧಕರಿಗೆ ಪ್ರಶಸ್ತಿ: ‘ಸಂಸ್ಕೃತಿ ಸಂಗಮ-2019’ ಪ್ರಶಸ್ತಿಯನ್ನು ಐವರು ಸಾಧಕರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ತಲಾ ₹10 ಸಾವಿರ ನಗದು ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು:ವಚನ ಸಾಹಿತ್ಯ- ಸಾಹಿತಿ ಡಾ.ಓ.ಎಲ್. ನಾಗಭೂಷಣಸ್ವಾಮಿ, ದಾಸ ಸಾಹಿತ್ಯ- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಜನಪದ ಸಾಹಿತ್ಯ- ಕಲಾವಿದೆ ಯಲ್ಲವ್ವ ದುರ್ಗಪ್ಪ ರೊಡ್ಡಪ್ಪನವರ, ಸಂಗೀತ ಕ್ಷೇತ್ರ- ಗಾಯಕ ವೀರೇಶ್ ಕಿತ್ತೂರ, ನೃತ್ಯ- ರಂಗಭೂಮಿ ಕಲಾವಿದೆ ವೈಜಯಂತಿ ಕಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.