ADVERTISEMENT

ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 20:00 IST
Last Updated 19 ಡಿಸೆಂಬರ್ 2019, 20:00 IST

ಬೆಂಗಳೂರು:ಪರಿಸರ ಜಾಗೃತಿ ಹಾಗೂ ಮಹಾತ್ಮ ಗಾಂಧೀಜಿಯ ಮೌಲ್ಯ ಸಾರುವ ಉದ್ದೇಶದಿಂದ ಉತ್ತರ ಪ್ರದೇಶದ ಗಾಜಿಪುರದ ಸತ್ಯದೇವ್ ಕಾಲೇಜುಗಳ ಸಮೂಹಸಂಸ್ಥೆಯ 12 ಸದಸ್ಯರ ತಂಡವುದೇಶದಾದ್ಯಂತ ಸೈಕಲ್ ಜಾಥಾ ಹಮ್ಮಿಕೊಂಡಿದೆ.

ಜಾಥಾದ ನೇತೃತ್ವ ವಹಿಸಿಕೊಂಡಿರುವ ಡಾ. ಸಾನಂದಕುಮಾರ್ ಸಿಂಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿ, ‘ಅ.2 ರಂದು ಜಮ್ಮು ಮತ್ತು ಕಾಶ್ಮೀರದ ಗಾಂಧಿ ಸ್ಮಾರಕದಿಂದ ಈ ಸೈಕಲ್ ಜಾಥಾ ಆರಂಭವಾಗಿದ್ದು, ಈಗಾಗಲೇ 13 ರಾಜ್ಯಗಳನ್ನು ಸುತ್ತಿ, ಪರಿಸರ ಜಾಗೃತಿ ಮೂಡಿಸಿದ್ದೇವೆ. ಈಗಕರ್ನಾಟಕವನ್ನೂ ಸುತ್ತಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.
ಆಂಧ್ರ ಪ್ರದೇಶ, ತಮಿಳುನಾಡು, ಪಾಂಡಿಚೇರಿ ಸೇರಿ ನಾನಾ ರಾಜ್ಯಗಳನ್ನು ಸುತ್ತಿ, ಅಂತಿಮವಾಗಿ 2020ರ ಜ.30ಕ್ಕೆ ಕನ್ಯಾಕುಮಾರಿ ಸೇರಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT