ADVERTISEMENT

ವಾಹನ ಮಾಲೀಕರಿಗೆ ದಂಡ

ನೋಂದಣಿ ಫಲಕಗಳಲ್ಲಿ ಅನಗತ್ಯ ಚಿಹ್ನೆ, ಲಾಂಛನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 23:08 IST
Last Updated 29 ಡಿಸೆಂಬರ್ 2019, 23:08 IST
ಸಂಘಟನೆಯ ಹೆಸರು ಹೊಂದಿದ್ದ ಕಾರಿನ ನಾಮಫಲಕ ಬಿಚ್ಚುತ್ತಿರುವುದು
ಸಂಘಟನೆಯ ಹೆಸರು ಹೊಂದಿದ್ದ ಕಾರಿನ ನಾಮಫಲಕ ಬಿಚ್ಚುತ್ತಿರುವುದು   

ದಾಬಸ್ ಪೇಟೆ: ವಾಹನಗಳ ನೋಂದಣಿ ಫಲಕಗಳ ಮೇಲೆ ಅನಗತ್ಯವಾಗಿ ಆಯೋಗ, ಒಕ್ಕೂಟ, ಸಂಘ–ಸಂಸ್ಥೆಗಳ ಹೆಸರು, ಚಿಹ್ನೆ/ಲಾಂಛನಗಳನ್ನು ಹಾಕಿಕೊಂಡ ವಾಹನಗಳ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳಿರುವ ನೂರಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು 20ಕ್ಕೂ ಅಧಿಕ ವಾಹನಗಳಿಗೆ ನೋಟಿಸ್ ನೀಡುವ ಜತೆ, ದಂಡ ವಸೂಲಿ ಮಾಡಲಾಗಿದೆ.

ವಾಹನ ನೋಂದಣಿ ಫಲಕಗಳ ಮೇಲೆ ರಾಷ್ಟ್ರೀಯ, ರಾಜ್ಯ ಮಟ್ಟದ ಖಾಸಗಿ ಆಯೋಗಗಳು, ಕನ್ನಡಪರ ಸಂಘಟನೆಗಳು, ಒಕ್ಕೂಟಗಳು, ಖಾಸಗಿ ಸಂಸ್ಥೆಗಳ ಹುದ್ದೆಗಳು, ಇನ್ನಿತರ ಸಂಘ–ಸಂಸ್ಥೆಗಳ ಹೆಸರುಗಳು ಹಾಗೂ ಲಾಂಛನಗಳನ್ನು ಹಾಕಿದ್ದರೆ ದಂಡ ವಿಧಿಸಲಾಗುತ್ತದೆ. ಈ ನಿಯಮ ಖಾಸಗಿ ವಾಹನಗಳಿಗೆ ಮಾತ್ರ ಅನ್ವಯವಾಗಲಿದ್ದು ಸರ್ಕಾರಿ ವಾಹನಗಳಿಗೆ, ಶಾಸಕರು, ಸಚಿವರಿಗೆ ವಿನಾಯಿತಿ ಇದೆ ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು.

ADVERTISEMENT

‘ಹತ್ತು ಸಾವಿರ ವಾಹನಗಳು ತಾಲ್ಲೂಕಿನಲ್ಲಿ ನೋಂದಣಿಯಾಗಿವೆ. ಮೋಟಾರು ವಾಹನಗಳ ನಿಯಮ ಮೀರಿದ ವಿನ್ಯಾಸವುಳ್ಳ ಹಾಗೂ ಹೆಸರುಗಳ ಉಲ್ಲೇಖದ ನಂಬರ್ ನೋಂದಣಿ ಫಲಕಗಳ ವಾಹನಗಳನ್ನು ವಶಕ್ಕೆ ಪಡೆದುಮೊದಲು ₹500 ಹಾಗೂ ಎರಡನೇ ಬಾರಿ ₹1 ಸಾವಿರ ದಂಡ ವಿಧಿಸಲಾಗುತ್ತದೆ. ಇದು ಪದೇ ಪದೇ ಮರುಕಳಿಸಿದರೆ ವಾಹನ ಮುಟ್ಟುಗೋಲು ಹಾಕಲಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.