ADVERTISEMENT

ದರ್ಗಾದ ಆಸ್ತಿ ಸ್ವಾಧೀನಪಡಿಸಿಕೊಂಡ ಆರೋಪ; ಕೆ.ಜಿ.ಎಫ್‌ ಬಾಬು ಬಂಧಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 7:50 IST
Last Updated 16 ಫೆಬ್ರುವರಿ 2023, 7:50 IST
   

ಬೆಂಗಳೂರು: ‘ನಗರದ ಕೆ.ಎಚ್‌.ರಸ್ತೆಯ ಎಂ.ಟಿ.ಆರ್ ಹೋಟೆಲ್‌ ಎದುರು ಇರುವ ವಕ್ಫ್‌ ಮಂಡಳಿಗೆ ಸೇರಿದ ಬಡಾ ಮಕಾನ್ ದರ್ಗಾದ ಆಸ್ತಿಯನ್ನು ಕೆ.ಜಿ.ಎಫ್. ಬಾಬು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್‌ ಕೋರ್ಟ್ ಸಂಘಟನೆಯ ಅಧ್ಯಕ್ಷ ಆಲಂ ಪಾಷಾ ಆಗ್ರಹಿಸಿದರು.

ಬಾಬು ಮತ್ತು ಅವರಿಗೆ ನೆರವಾದ ವಕ್ಫ್‌ ಮಂಡಳಿಯ ಅಧ್ಯಕ್ಷ ಮೌಲಾನಾ ಶಫಿ ಸಾಅದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಈ ಇಬ್ಬ ರನ್ನೂ ಬಂಧಿಸಬೇಕು. ಬಡಾ ಮಕಾನ್‌ ದರ್ಗಾದ 33 ಸಾವಿರ ಚದರಡಿ ಭೂಮಿ ರಕ್ಷಿಸುವಲ್ಲಿ ವಿಫಲವಾಗಿರುವ ಮಂಡಳಿ ಅಧ್ಯಕ್ಷರನ್ನು ಕೂಡಲೇ ವಜಾ ಗೊಳಿಸಬೇಕು’ ಎಂದು ಬುಧವಾರ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜ.27ರಿಂದ ಫೆ.3ರ ಅವಧಿಯಲ್ಲಿ ಹಲವು ಮಂದಿ ಅಪಾಯಕಾರಿ ಮಾರಕಾಸ್ತ್ರಗಳೊಂದಿಗೆ ತೆರಳಿ, ಜೆಸಿಬಿ ಯಂತ್ರ ಗಳ ಮೂಲಕ ಕಟ್ಟಡಗಳನ್ನು ಕೆಡವಿ, ಸರಕು ಸಾಗಣೆ ವಾಹನಗಳ ಅವಶೇಷ ಗಳನ್ನು ಸಾಗಾಟ ಮಾಡಿದ್ದಾರೆ. ಇದ ರಿಂದ ಮುಸ್ಲಿಂ ಸಮುದಾಯಕ್ಕೆ ನೋವಾ ಗಿದೆ. ಆದ್ದರಿಂದ ಸರ್ಕಾರವು ಆಸ್ತಿ ರಕ್ಷಿಸ ಬೇಕು’ ಎಂದು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.