ಬೆಂಗಳೂರು: ವಿಧಾನಸಭೆ ಸಚಿವಾಲಯದ ಡೆಟಾ ಎಂಟ್ರಿ ಸೂಪರ್‌ವೈಸರ್ ಹಾಗೂ ಪದ ನಿಮಿತ್ತ ಶಾಖಾಧಿಕಾರಿ ಎಂ.ಎಂ.ಆಶಾ ಅವರನ್ನು ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಗೆ ವರ್ಗಾಯಿಸಲಾಗಿದೆ.
ಈಗ ಹಂಚಿಕೆಯಾಗಿರುವ ಎಲ್ಲ ಕಾರ್ಯಗಳಿಂದ ಮುಕ್ತಗೊಳಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ತುರ್ತು ಆದೇಶದಲ್ಲಿ ತಿಳಿಸಿದ್ದಾರೆ.
ಸಚಿವಾಲಯದಲ್ಲಿ ನಡೆದ ಅಕ್ರಮ ನೇಮಕಾತಿಯ ಸಂದರ್ಶನ ಸಮಿತಿ ಯಲ್ಲಿ ಇವರು ಸದಸ್ಯರಾಗಿದ್ದರು.ಅರ್ಹತೆ ಇಲ್ಲದಿದ್ದರೂ ನೇಮಕ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.