ADVERTISEMENT

ರೋಗ ನಿರೋಧಕ ವಿಜ್ಞಾನ ಅಧ್ಯಯನಕ್ಕೆ ಕಾಲೇಜು ಸ್ಥಾಪನೆ: ಡಿ.ಹೇಮಚಂದ್ರ ಸಾಗರ್

ದಯಾನಂದ ಸಾಗರ ಸಂಸ್ಥೆಯ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:00 IST
Last Updated 24 ಜುಲೈ 2021, 19:00 IST
ದಯಾನಂದ ಸಾಗರ ಇನ್‌ಸ್ಟಿಟ್ಯೂಷನ್ಸ್‌ನ (ಡಿಎಸ್ಐ) ಶತಮಾನೋತ್ಸವ ಹಾಗೂ ಸಂಸ್ಥಾಪಕರ ದಿನವನ್ನು ಹೇಮಚಂದ್ರ ಸಾಗರ್ ಉದ್ಘಾಟಿಸಿದರು.
ದಯಾನಂದ ಸಾಗರ ಇನ್‌ಸ್ಟಿಟ್ಯೂಷನ್ಸ್‌ನ (ಡಿಎಸ್ಐ) ಶತಮಾನೋತ್ಸವ ಹಾಗೂ ಸಂಸ್ಥಾಪಕರ ದಿನವನ್ನು ಹೇಮಚಂದ್ರ ಸಾಗರ್ ಉದ್ಘಾಟಿಸಿದರು.   

ಬೆಂಗಳೂರು: ‘ರೋಗನಿರೋಧಕ ವಿಜ್ಞಾನ ಹಾಗೂ ಭವಿಷ್ಯದ ರೋಗಗಳ ಅಧ್ಯಯನಕ್ಕಾಗಿ ಕಾಲೇಜು ಸ್ಥಾಪಿಸಲಾಗುವುದು. ಪಶುವೈದ್ಯಕೀಯ ಮತ್ತು ಕೃಷಿ ಕಾಲೇಜುಗಳನ್ನೂ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ದಯಾನಂದ ಸಾಗರ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷಡಿ.ಹೇಮಚಂದ್ರ ಸಾಗರ್ ತಿಳಿಸಿದರು.

ದಯಾನಂದ ಸಾಗರ ಇನ್‌ಸ್ಟಿಟ್ಯೂಷನ್ಸ್‌ (ಡಿಎಸ್ಐ) ಶನಿವಾರ ಹಮ್ಮಿಕೊಂಡಿದ್ದಸಂಸ್ಥೆಯ ಶತಮಾನೋತ್ಸವ ಹಾಗೂಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಪರ್ಧೆ ಯಾವಾಗಲೂ ನಮ್ಮೊಳಗೆ ಇರಬೇಕು. ಸಾಧನೆಗೆ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ನಮ್ಮ ಸಂಸ್ಥೆ ಸಮಾಜಕ್ಕೆ ಒಳಿತು ಮಾಡುವ ಉದ್ದೇಶ ಹೊಂದಿವೆ.ಡಾ.ಚಂದ್ರಮ್ಮ ಸಾಗರ್ ಅವರಸಾಮಾಜಿಕ ಜವಾಬ್ದಾರಿಯ ಕನಸನ್ನು ಪೂರ್ಣಗೊಳಿಸುವ ದೃಢಸಂಕಲ್ಪ ಮಾಡಿದ್ದೇವೆ. ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳನ್ನು ನಿರ್ಮಿಸುವ ಮೂಲಕ ಅವರ ಕನಸು ಕಾರ್ಯರೂಪಕ್ಕೆ ಬರಲಿದೆ’ ಎಂದರು.

ADVERTISEMENT

ಸಂಸ್ಥೆಯ ಉಪಾಧ್ಯಕ್ಷ ಪ್ರೇಮಚಂದ್ರ ಸಾಗರ್, ‘ನಮ್ಮ ತಂದೆ ದಯಾನಂದ ಸಾಗರ್ ಅವರು ಜ್ಞಾನದಿಂದ ಮುಕ್ತ ಮನೋಭಾವ ಹೊಂದಿದ್ದರು. ಜ್ಞಾನವು ಮನುಷ್ಯರನ್ನು ಪರಿಪೂರ್ಣರನ್ನಾಗಿ ರೂಪಿಸುತ್ತದೆ ಎಂದು ನಂಬಿದ್ದರು’ ಎಂದರು.

‘ಸಂಸ್ಥೆಗೆನೂತನ ಶಿಕ್ಷಣ ನೀತಿ ಬಹಳಷ್ಟು ಸ್ವಾತಂತ್ರ್ಯ ನೀಡಲಿದೆ. ಸಂಸ್ಥೆ ಈಗ ಜಾಗತಿಕ ಮಟ್ಟಕ್ಕೆ ತಲುಪುತ್ತಿದ್ದು, ನಮ್ಮ ಗುರಿಗಳನ್ನು ಸಾಧಿಸುವವರೆಗೆ ವಿಶ್ರಮಿಸುವುದಿಲ್ಲ’ ಎಂದರು.

ಡಿಎಸ್‍ಐ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ವಿಶೇಷ ಲೋಗೊವನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.