ADVERTISEMENT

ನಿಧನ ವಾರ್ತೆ: ಡಾ. ಜಿ. ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 18:21 IST
Last Updated 8 ನವೆಂಬರ್ 2021, 18:21 IST
ಡಾ.ಜಿ. ತಿಮ್ಮಯ್ಯ
ಡಾ.ಜಿ. ತಿಮ್ಮಯ್ಯ   

ಬೆಂಗಳೂರು: ಖ್ಯಾತ ಆರ್ಥಿಕ ತಜ್ಞ ಡಾ.ಜಿ.ತಿಮ್ಮಯ್ಯ (84) ಅವರು ನಗರದಲ್ಲಿ ಶನಿವಾರ ನಿಧನರಾದರು.

ತಿಮ್ಮಯ್ಯ ಅವರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಎಸ್‌ಇಸಿ) ಅಧ್ಯಕ್ಷ ಮತ್ತು ನಿರ್ದೇಶ ಕರಾಗಿ ಕಾರ್ಯನಿರ್ವಹಿಸಿದ್ದರು. ಜತೆಗೆ, ಕರ್ನಾಟಕ ಹಣಕಾಸು ಆಯೋಗದ ಅಧ್ಯಕ್ಷ ಮತ್ತು ರಾಜ್ಯ ಯೋಜನಾ ಮಂಡಳಿ ಮತ್ತು ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯರಾಗಿದ್ದರು.

ಬಾಂಬೆ, ಮೈಸೂರು ಮತ್ತು ಬೆಂಗ ಳೂರು ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಿದ್ದ ಅವರು, 1987ರಿಂದ 1994ರವರೆಗೆ ಕರ್ನಾಟಕ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದರು.

ADVERTISEMENT

ಬಾಂಬೆ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದ ಡಾ.ಜಿ. ತಿಮ್ಮಯ್ಯ ಅವರು, 16 ಪುಸ್ತಕ ಗಳು ಮತ್ತು ಹಲವಾರು ಸಂಶೋ ಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2012ರಲ್ಲಿ ಇವರಿಗೆ ಗೌರವ ಡಾಕ್ಟರೇಟ್‌ ನೀಡಿತ್ತು.

ತಿಮ್ಮಯ್ಯ ಅವರಿಗೆ ‍ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.