ADVERTISEMENT

ರಜತ್‌ಗೆ ಕೊಲೆ ಬೆದರಿಕೆ: ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 18:39 IST
Last Updated 7 ಆಗಸ್ಟ್ 2025, 18:39 IST
ರಜತ್‌ ಕಿಶನ್‌
ರಜತ್‌ ಕಿಶನ್‌   

ಬೆಂಗಳೂರು: ಕಿಡಿಗೇಡಿಗಳಿಂದ ಕೊಲೆ ಬೆದರಿಕೆಯ ಸಂದೇಶಗಳು ಬರುತ್ತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಅವರು ಗುರುವಾರ ರಾತ್ರಿ ಪೊಲೀಸರಿಗೆ ದೂರು ನೀಡಿದರು.

ದೂರಿನ ಪ್ರತಿಯನ್ನು ಪಶ್ಚಿಮ ವಿಭಾಗದ ಸೆನ್‌ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಿದ್ದು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಸೌಜನ್ಯಾ ಅವರ ಮನೆಗೆ ಬುಧವಾರ ರಜತ್‌ ಕಿಶನ್‌ ಭೇಟಿ ನೀಡಿದ್ದರು. ಸೌಜನ್ಯಾ ಅವರ ತಾಯಿಯನ್ನು ಭೇಟಿ ಮಾಡಿ ಹೊರಗೆ ಬರುವಾಗ ಗುಂಪು ಘರ್ಷಣೆ ನಡೆದಿತ್ತು. ಯೂಟ್ಯೂಬ್‌ ಚಾನೆಲ್‌ಗಳ ಮೂವರ ಮೇಲೆ ಹಲ್ಲೆ ನಡೆದಿತ್ತು. ಆ ಸಂದರ್ಭದಲ್ಲಿ ರಜತ್‌ ಅವರು ಸ್ಥಳದಲ್ಲೇ ಇದ್ದರು.

ADVERTISEMENT

‘ನನ್ನ ಪತ್ನಿಯ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಬೆದರಿಕೆ ಕರೆಗಳು ಬರುತ್ತಿವೆ. ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ರಜತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.