ADVERTISEMENT

ಮದ್ಯ ಖರೀದಿ ಬಹಿಷ್ಕರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 19:45 IST
Last Updated 30 ಏಪ್ರಿಲ್ 2022, 19:45 IST

ಬೆಂಗಳೂರು: ಇ–ಇಂಡೆಂಟ್‌ ವ್ಯವಸ್ಥೆ ವಿರೋಧಿಸಿ ಮೇ 6ರಂದುಪಾನೀಯ ನಿಗಮದಿಂದ ಮದ್ಯ ಖರೀದಿ ಬಹಿಷ್ಕರಿಸಲು ಮದ್ಯದ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ.

‘ಹೊಸ ಪದ್ಧತಿ ಜತೆಗೆ ಹಳೇ ಪದ್ಧತಿಯನ್ನುಕನಿಷ್ಠ ಮೂರು ತಿಂಗಳಾದರೂ ಉಳಿಸಿಕೊಳ್ಳಬೇಕು ಎಂಬ ಮನವಿಗೆ ಪಾನೀಯ ನಿಗಮದ(ಕೆಎಸ್‌ಬಿಸಿಎಲ್‌) ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಫೆಡರೇಷನ್‌ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

ರಾತ್ರಿ 9ರಿಂದ ಬೆಳಿಗ್ಗೆ 9ರ ಅವಧಿಯಲ್ಲಷ್ಟೇ ಬೇಡಿಕೆ ಪಟ್ಟಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದು ಸೇರಿದಂತೆ ಹೊಸ ಪದ್ಧತಿಯಲ್ಲಿ ಹಲವು ದೋಷಗಳಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರೂ ವ್ಯವಸ್ಥೆ ಬದಲಾಗಿಲ್ಲ. ಆದ್ದರಿಂದ ಮದ್ಯ ಮತ್ತು ಬಿಯರ್ ಖರೀದಿ ಬಹಿಷ್ಕರಿಸಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.