ADVERTISEMENT

ವಾಯುಮಾಲಿನ್ಯ ಪ್ರಮಾಣ ಕ್ಷೀಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 19:02 IST
Last Updated 28 ಅಕ್ಟೋಬರ್ 2019, 19:02 IST

ಬೆಂಗಳೂರು: ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಆಗುತ್ತಿದ್ದ ವಾಯುಮಾಲಿನ್ಯಕ್ಕೆ ಹೋಲಿಸಿದರೆ, ಈ ಬಾರಿ ಈ ಪ್ರಮಾಣ ಸಾಕಷ್ಟು ಕಡಿಮೆ ಇತ್ತು. ಸಂಜೆ ವೇಳೆಗೆ ಬಿದ್ದ ಮಳೆ ಮತ್ತು ವಾಹನಗಳ ಸಂಚಾರ ಕಡಿಮೆ ಇದ್ದುದು ಇದಕ್ಕೆ ಕಾರಣ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಮಂಡಳಿಯ ದತ್ತಾಂಶಗಳ ಪ್ರಕಾರ, ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಅದರಲ್ಲಿಯೂ, ನಿಮ್ಹಾನ್ಸ್‌ ಸುತ್ತ–ಮುತ್ತ ಗಾಳಿಯ ಗುಣಮಟ್ಟ ಉತ್ತಮದಿಂದ ತೃಪ್ತಿದಾಯಕ ಮಟ್ಟಕ್ಕೆ ಏರಿದೆ. ಸಾಮಾನ್ಯವಾಗಿ, ಈ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 36 ಇರುತ್ತದೆ. ಆದರೆ, ಭಾನುವಾರ ಇದು 67ಕ್ಕೆ ಏರಿತ್ತು.

ಹೆಬ್ಬಾಳ ಸುತ್ತ–ಮುತ್ತಲಿನ ಪ್ರದೇಶದಲ್ಲಿಯೂ ಭಾನುವಾರ ವಾಯು ಗುಣಮಟ್ಟ ಸುಧಾರಿಸಿದೆ. ಸಾಮಾನ್ಯವಾಗಿ 46 ಎಕ್ಯೂಐ ಇದ್ದದ್ದು, 69ಕ್ಕೆ ಏರಿದೆ.

ADVERTISEMENT

ಸೆಂಟ್ರಲ್‌ ಸಿಲ್ಕ್‌ಬೋರ್ಡ್‌, ಮೈಸೂರು ರಸ್ತೆ, ಜಯನಗರ ಮತ್ತು ಬಸವೇಶ್ವನಗರ, ರೈಲ್ವೆ ನಿಲ್ದಾಣದಲ್ಲಿ ವಾಯುಗುಣಮಟ್ಟ ಸಾಕಷ್ಟು ಸುಧಾರಿಸಿತ್ತು ಎಂದು ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.