ADVERTISEMENT

ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 20:17 IST
Last Updated 3 ಸೆಪ್ಟೆಂಬರ್ 2020, 20:17 IST
ಕೆ.ಬಿ. ಅರಸಪ್ಪ
ಕೆ.ಬಿ. ಅರಸಪ್ಪ   

ಬೆಂಗಳೂರು: ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ಸಾಲದ ಮೇಲಿನ ಕಂತುಗಳ ಪಾವತಿಗೆ 2021ರ ಮಾರ್ಚ್‌ 31ರವರೆಗೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಒತ್ತಾಯಿಸಿದ್ದಾರೆ.‌

ಆರ್ಥಿಕ ಕುಸಿತದ ಕಾರಣ ಎಂಎಸ್‌ಎಂಇ ಸ್ಥಿತಿಯ ಬಗ್ಗೆ ‘ಕಾಸಿಯಾ’ ಕಳವಳ ವ್ಯಕ್ತಪಡಿಸಿದೆ. ‘ಪರಿಸ್ಥಿತಿ ಸುಧಾರಿಸದಿದ್ದರೆ ಎಂಎಸ್‌ಎಂಇ ವಲಯದ ಉದ್ಯಮಗಳು ಬಾಗಿಲು ಮುಚ್ಚಬೇಕಾಗಬಹುದು ಎಂಬ ಆತಂಕಹೆಚ್ಚಾಗಿದೆ.ಸದ್ಯಕ್ಕೆ ಆರ್ಥಿಕ ಪುನಶ್ಚೇತನದ ಯಾವುದೇ ಭರವಸೆ ಇಲ್ಲದಿರುವುದರಿಂದ, ಸಾಲ ಮರುಪಾವತಿಗೆ ಇದ್ದ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT