ಗ್ರಂಥಾಲಯ
(ಸಾಂದರ್ಭಿಕ ಚಿತ್ರ)
ಕೆ.ಆರ್.ಪುರ: ದೊಡ್ಡಕನ್ನಲ್ಲಿಯ ರಾಜೀವ್ ಗಾಂಧಿ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಕಾಲೊನಿಯಲ್ಲಿ ಗ್ರಂಥಾಲಯ ನಿರ್ಮಿಸುವಂತೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕನ್ನಲ್ಲಿ ಕೃಷ್ಣಪ್ಪ ಅವರು ಒತ್ತಾಯಿಸಿದರು.
ಮಹದೇವಪುರ ಬಿಬಿಎಂಪಿ ವಲಯ ಆಯುಕ್ತ ರಮೇಶ್ ಅವರಿಗೆ ಮನವಿ ಸಲ್ಲಿಸಿದ ಅವರು, ‘ಕಾಲೊನಿಯಲ್ಲಿ 482 ಮನೆಗಳಿದ್ದು ಸುಮಾರು 2000 ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಸಿಎ ನಿವೇಶನವಿದ್ದು ವಿದ್ಯಾರ್ಥಿಗಳಿಗೆ ಓದುಗರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಪೂರ್ತಿ ಗ್ರಂಥಾಲಯ ನಿರ್ಮಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.