ADVERTISEMENT

ಬೋಧಗಯಾ ಬಿಟ್ಟುಕೊಡಲು ಒತ್ತಾಯ: ಬೆಂಗಳೂರಲ್ಲಿ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 20:17 IST
Last Updated 6 ಜನವರಿ 2026, 20:17 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪಾಸಿಕಾ ಮತ್ತು ಉಪಾಸಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಬೋಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿದ್ದ ಬೌದ್ಧ ಬಿಕ್ಕುಗಳು.
–ಪ್ರಜಾವಾಣಿ ಚಿತ್ರ: ರಂಜು ಪಿ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪಾಸಿಕಾ ಮತ್ತು ಉಪಾಸಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಬೋಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿದ್ದ ಬೌದ್ಧ ಬಿಕ್ಕುಗಳು. –ಪ್ರಜಾವಾಣಿ ಚಿತ್ರ: ರಂಜು ಪಿ   

ಬೆಂಗಳೂರು: ಬೌದ್ಧರ ಪವಿತ್ರ ಸ್ಥಳ, ಬಿಹಾರದ ಬೋಧಗಯಾ ಮಹಾಬೋಧಿ, ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಉಪಾಸಿಕ ಮತ್ತು ಉಪಾಸಕ ಚಾರಿಟೇಬಲ್ ಟ್ರಸ್ಟ್ ಹಾಗೂ ಬೋಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೋಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದ ರಾಜ್ಯ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷ ಬಂತೆ ಬೋಧಿದತ್ತ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಬೌದ್ಧ ಬಿಕ್ಕುಗಳು ಹಾಗೂ ಭೀಮ್‌ ಪ್ರಜಾ ಸಂಘದವರು ಭಾಗವಹಿಸಿದ್ದರು.

ಬಂತೆ ಬೋಧಿದತ್ತ ಮಾತನಾಡಿ, ‘ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡದೆ ಅನ್ಯಾಯ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ನಡೆದ ಈ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ. ಸಂವಿಧಾನದ ಕಲಂ 13, 25,26, ಮತ್ತು 29 ರ ರಕ್ಷಣೆ ಮತ್ತು ಅನುಷ್ಠಾನಕ್ಕಾಗಿ ಬಿ.ಟಿ.ಕಾಯ್ದೆ 1949 ರದ್ದುಗೊಳಿಸಿ ಬುದ್ಧ ಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ಒಪ್ಪಿಸಬೇಕು. ದೇಶದ ಬಿಕ್ಕು ಮಹಾಸಂಘ ಫೆ.12 ರಂದು 'ದೆಹಲಿ ಚಲೋ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ' ದೇಶಾದ್ಯಾಂತ ಕರೆಕೊಟ್ಟಿದ್ದಾರೆ. ಆ ನಿಮಿತ್ತ ಅಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

 ಸಮಿತಿಯ ಭಂತೆ ವರಜ್ಯೋತಿ ಥೇರಾ, ಭಂತೆ ವಿನಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.