ADVERTISEMENT

ಡೆಂಗಿ: ರಾಜ್ಯದಲ್ಲಿ ಒಂದೇ ದಿನ 409 ಪ್ರಕರಣ ದೃಢ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:52 IST
Last Updated 22 ಜುಲೈ 2024, 15:52 IST
<div class="paragraphs"><p>ಡೆಂಗಿ ಪ್ರಕರಣ ( ಸಾಂಕೇತಿಕ ಚಿತ್ರ)</p></div>

ಡೆಂಗಿ ಪ್ರಕರಣ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 181 ಸೇರಿ ರಾಜ್ಯದಲ್ಲಿ 409 ಡೆಂಗಿ ಪ್ರಕರಣಗಳು ಹೊಸದಾಗಿ ಸೋಮವಾರ ದೃಢಪಟ್ಟಿವೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,402ಕ್ಕೆ ತಲುಪಿದೆ.

24 ಗಂಟೆಗಳ ಅವಧಿಯಲ್ಲಿ 2,511 ಪರೀಕ್ಷೆಗಳನ್ನು ನಡೆಸಲಾಗಿದ್ದು, 17 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,204 ಪರೀಕ್ಷೆಗಳನ್ನು ನಡೆಸಲಾಗಿದ್ದು, 181 ಪ್ರಕರಣಗಳು ದೃಢಪಟ್ಟಿವೆ.

ADVERTISEMENT

ತುಮಕೂರು, ಹಾಸನದಲ್ಲಿ ತಲಾ 55, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ತಲಾ 23 ಹಾಗೂ ಉಡುಪಿಯಲ್ಲಿ 10 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಉಳಿದಂತೆ ಇದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.