ADVERTISEMENT

ನಿರಾಶ್ರಿತರೊಂದಿಗೆ ಕಾರಜೋಳ ದೀಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 19:03 IST
Last Updated 28 ಅಕ್ಟೋಬರ್ 2019, 19:03 IST
ಬೆಂಗಳೂರಿನ ನಿರಾಶ್ರಿತ ಕೇಂದ್ರದಲ್ಲಿ ಸೋಮವಾರ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ದೀಪಾವಳಿ ಆಚರಿಸಿದರು.
ಬೆಂಗಳೂರಿನ ನಿರಾಶ್ರಿತ ಕೇಂದ್ರದಲ್ಲಿ ಸೋಮವಾರ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ದೀಪಾವಳಿ ಆಚರಿಸಿದರು.   

ಬೆಂಗಳೂರು:ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿ ಸೋಮವಾರಉಪಮುಖ್ಯಮಂತ್ರಿ ಗೋವಿಂದ ಎಂ‌. ಕಾರಜೋಳ ಅವರು ನಿರಾಶ್ರಿತರೊಂದಿಗೆ ಸಿಹಿ ಹಂಚಿ ದೀಪಾವಳಿ ಹಬ್ಬವನ್ನು ಆಚರಿಸಿದರು.

‘ಪ್ರತಿ ವರ್ಷ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ನಿರಾಶ್ರಿತರು‌ ಒಂಟಿಯಾಗಿದ್ದಾರೆ. ಅವರೊಂದಿಗೆ ಹಬ್ಬ ಆಚರಿಸಿ ಅವರ ಅಹವಾಲುಗಳನ್ನು ಆಲಿಸಿ, ಪರಿಹರಿಸುವ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ನಿರಾಶ್ರಿತರೊಂದಿಗೆ ಹಬ್ಬ ಆಚರಿಸಿದೆ’ ಎಂದರು.

ಈ ಕೇಂದ್ರದಲ್ಲಿ ಒಟ್ಟು 754 ನಿರಾಶ್ರಿತರಿದ್ದಾರೆ. ರಾಜ್ಯದ 14 ನಿರಾಶ್ರಿತರ ಕೇಂದ್ರಗಳಲ್ಲಿ 1,250 ನಿರಾಶ್ರಿತರಿದ್ದಾರೆ. ಈ ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ, ವಿವಿಧ ತರಬೇತಿ ನೀಡಲಾಗುತ್ತಿದ್ದು, ಉದ್ಯೋಗಕ್ಕೆ ಹೋಗುವವರಿಗೆ ನೆರವು ನೀಡಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.