ಯಲಹಂಕ: ಯಲಹಂಕ ಬಿಜೆಪಿ ಮುಖಂಡರು ಹಮ್ಮಿಕೊಂಡಿದ್ದ ‘ಧರ್ಮಸ್ಥಳ ಚಲೊ ಅಭಿಯಾನ’ ಕಾರು ಯಾತ್ರೆಗೆ ಸಿಂಗನಾಯಕನಹಳ್ಳಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ 6ಕ್ಕೆ ವಾಹನಕ್ಕೆ ಪೂಜೆ ನೆರವೇರಿಸುವ ಯಾತ್ರೆಗೆ ಚಾಲನೆ ನೀಡಿದ ಶಾಸಕ ವಿಶ್ವನಾಥ್ ಮಾತನಾಡಿ, ‘ಕೆಲವು ವ್ಯಕ್ತಿಗಳು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ ಪ್ರಚಾರ ಮಾಡುವ ಮೂಲಕ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಎಡಪಂಥೀಯರ ಕೈವಾಡವಿದೆ. ನಾವೆಲ್ಲರೂ ಸದಾ ಧರ್ಮಸ್ಥಳದ ಬೆಂಬಲಕ್ಕಿದ್ದೇವೆ ಎಂಬ ಸಂದೇಶ ಸಾರಲು ನೂರಾರು ಕಾರುಗಳ ಮೂಲಕ ಯಾತ್ರೆಯನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ಸತೀಶ್ ಕಡತನಮಲೆ, ಡಿ.ಜಿ. ಅಪ್ಪಯಣ್ಣ, ಟಿ. ಮುನಿರೆಡ್ಡಿ, ಎಸ್.ಜಿ. ನರಸಿಂಹಮೂರ್ತಿ, ಅದ್ದೆ ವಿಶ್ವನಾಥಪುರ ಮಂಜುನಾಥ್, ಎಸ್.ಜಿ. ಪ್ರಶಾಂತ್‌ರೆಡ್ಡಿ, ಎಂ. ಮೋಹನ್‌ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.