ADVERTISEMENT

16ರಿಂದ ದೃಶ್ಯ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 18:36 IST
Last Updated 14 ಜನವರಿ 2019, 18:36 IST

ಬೆಂಗಳೂರು: ದೃಶ್ಯ ರಂಗತಂಡ ಇದೇ 16ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರಮಾತನಾಡಿದ ದೃಶ್ಯ ರಂಗತಂಡದ ಸಂಸ್ಥಾಪಕ ನಿರ್ದೇಶಕಿದಾಕ್ಷಾಯಿಣಿ ಭಟ್‌,‘ಪ್ರತಿ ವರ್ಷದಂತೆ ಈ ವರ್ಷವೂ ನಾಟಕೋತ್ಸವದಲ್ಲಿನಾಲ್ವರು ಸಾಧಕರಿಗೆ ರಂಗ ಗೌರವ ಸಲ್ಲಿಸಲಾಗುತ್ತದೆ.

ದೃಶ್ಯ ರಂಗತಂಡದ ಕಲಾವಿದರು, ಜಯಪ್ರಕಾಶ ಮಾವಿನಕುಳಿ ರಚಿಸಿದ ‘ಅಭಿಯಾನ’ ಮತ್ತು ಭೀಷ್ಮ ಸಹಾನಿ ರಚನೆಯ ಹಾನೂಶ್‌ ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ.ಬಿಂದು ಮಾಲಿನಿ ಹಾಗೂ ಎಂ.ಡಿ.ಪಲ್ಲವಿ ಅವರು ‘ಸ್ತ್ರೀ ಕಥನ ಗಾನ ಯಾನ’ ವಿಶೇಷಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪ್ರತಿ ನಾಟಕಕ್ಕೂ ₹100 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.