ADVERTISEMENT

ಡಯಾಲಿಸಿಸ್‌ ಕೇಂದ್ರಕ್ಕೇ ಬೇಕಿದೆ ಚಿಕಿತ್ಸೆ!

ನಾಗರಬಾವಿಯ ರಾಮಕೃಷ್ಣ ಹೆಗಡೆ ಉದ್ಯಾನದ ಬಳಿ ಇರುವ ಕೇಂದ್ರ

ಚಿಕ್ಕ ರಾಮು
Published 13 ಆಗಸ್ಟ್ 2019, 19:53 IST
Last Updated 13 ಆಗಸ್ಟ್ 2019, 19:53 IST
ಡಯಾಲಿಸಿಸ್‌ ಕೇಂದ್ರದ ದುಸ್ಥಿತಿ
ಡಯಾಲಿಸಿಸ್‌ ಕೇಂದ್ರದ ದುಸ್ಥಿತಿ   

ರಾಜರಾಜೇಶ್ವರಿನಗರ: ಡಯಾಲಿಸಿಸ್ ಕೇಂದ್ರದ ಕಟ್ಟಡ ಉದ್ಘಾಟನೆಯಾಗಿ ವರ್ಷ ಕಳೆದರೂ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ.

ನಾಗರಬಾವಿಯ ರಾಮಕೃಷ್ಣ ಹೆಗಡೆ ಉದ್ಯಾನದ ಬಳಿ ವಿಶಾಲವಾದ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಕೇಂದ್ರ ತಲೆ ಎತ್ತಿದ್ದರೂ, ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತಿಲ್ಲ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯ ಕೊನೆಯಲ್ಲಿ ಲೋಕಾರ್ಪಣೆಯಾಗಿರುವುದು ಬಿಟ್ಟರೆ, ಅಂದಿನಿಂದ ಇಂದಿನವರೆಗೆ ಕಟ್ಟಡದ ಬಾಗಿಲೇ ತೆರೆದಿಲ್ಲ.

ADVERTISEMENT

ಮಾಗಡಿ, ಕುಣಿಗಲ್, ಹುಲಿಯೂರುದುರ್ಗ, ನಾಗಮಂಗಲ, ಚನ್ನಪಟ್ಟಣ, ಕನಕಪುರ, ರಾಮನಗರ, ಮೂಲ ನಿವಾಸಿಗಳು ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ಲಗ್ಗೆರೆ, ಲಕ್ಷ್ಮಿದೇವಿನಗರ, ಸುಂಕದಕಟ್ಟೆ, ಅನ್ನಪೂರ್ಣೇಶ್ವರಿನಗರ, ಹೇರೋಹಳ್ಳಿ, ದೊಡ್ಡಬಿದರಕಲ್ಲು, ಉಲ್ಲಾಳು ಮುಂತಾದ ಬಡಾವಣೆಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕರುಖಾಸಗಿ ಕಾರ್ಖಾನೆ, ಗಾರ್ಮೆಂಟ್ಸ್, ಸಣ್ಣ
ಪುಟ್ಟ ಅಂಗಡಿಯಿಟ್ಟುಕೊಂಡು ಜೀವನ ಸಾಗಿಸುತ್ತಿದ್ದು, ದುಬಾರಿ ವೆಚ್ಚ ಭರಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇವರಿಗೆ ಸಾಧ್ಯವಿಲ್ಲ.

‘ಸುಮಾರು ₹4 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಯಂತ್ರಗಳನ್ನು ಖರೀದಿಸಲು ಸರ್ಕಾರ ಮತ್ತು ಬಿ.ಬಿ.ಎಂ.ಪಿ ವತಿಯಿಂದ ಹಣ ಬಿಡುಗಡೆ ಮಾಡಿಸಲು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿರಾಸಕ್ತಿ ತೋರಿದ ಕಾರಣ ಕಟ್ಟಡ ಇಂದು ಅವನತಿಯ ಹಾದಿ ಹಿಡಿದಿದೆ’ ಎಂದು ನಾಗರಿಕರು ಹೇಳುತ್ತಾರೆ.

‘ಮಧ್ಯಮ ಬಡವರ್ಗದ ರೋಗಿಗಳಿಗೆ ಸುಸಜ್ಜಿತವಾದ ಕಟ್ಟಡದಲ್ಲಿ ಉಚಿತ ಡಯಾಲಿಸಿಸ್, ಚಿಕಿತ್ಸೆ, ಔಷಧಿ, ಊಟೋಪಚಾರದ ವ್ಯವಸ್ಥೆ
ಯನ್ನು ಮಾಡಿ ಕೆಲವು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು’ ಬಿ.ಬಿ.ಎಂ.ಪಿ ಸದಸ್ಯ ಜಿ.ಮೋಹನ್‍ಕುಮಾರ್ ಹೇಳಿದರು.

₹75 ಲಕ್ಷ

ಡಯಾಲಿಸಿಸ್‌ ಕೇಂದ್ರದ ನಿರ್ಮಾಣ ವೆಚ್ಚ

25

ಕೇಂದ್ರದಲ್ಲಿನ ಹಾಸಿಗೆಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.