ಬೆಂಗಳೂರು: ಚಿನ್ನಾಭರಣ ವ್ಯಾಪಾರ ಸಂಸ್ಥೆ ಜೋಯಾಲುಕ್ಕಾಸ್‌ನಲ್ಲಿ ಶುಕ್ರವಾರ ‘ಪ್ರೈಡ್ ಡೈಮಂಡ್ ವೆಡ್ಡಿಂಗ್’ ಸಂಗ್ರಹ ಅನಾವರಣಗೊಳಿಸಲಾಯಿತು.
ನಗರದ ಎಂ.ಜಿ.ರಸ್ತೆಯ ಮಳಿಗೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಮಾಳವಿಕಾ ಶರ್ಮಾ, ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಬೇಬಿ ಜಾರ್ಜ್ ಹಾಗೂ ಗ್ರಾಹಕರು ವಜ್ರಾಭರಣಗಳನ್ನು ಪ್ರದರ್ಶಿಸಿದರು.
ಇದೇ ವೇಳೆ ರೂಪದರ್ಶಿಗಳು ವಜ್ರಾಭರಣಗಳನ್ನು ಧರಿಸಿ ರ್‍ಯಾಂಪ್ ವಾಕ್ ಮಾಡಿದರು.
ಈ ಆಭರಣಗಳ ಸಂಗ್ರಹವು ವಧುವಿನ ಸೌಂದರ್ಯ ಹೆಚ್ಚಿಸಲಿದೆ. ಹೊಳೆಯುವ ವಜ್ರದ ನೆಕ್ಲೇಸ್‌ಗಳು, ಸೊಗಸಾದ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರಗಳು ಪ್ರಮುಖ ಆಕರ್ಷಣೆಯಾಗಿವೆ.
ಬೇಬಿ ಜಾರ್ಜ್ ಮಾತನಾಡಿ, ‘ಸೊಬಗು ಹಾಗೂ ಅತ್ಯಾಧುನಿಕತೆ ಬಯಸುವ ವಧುಗಳಿಗಾಗಿ ವಿನ್ಯಾಸಗೊಳಿಸಿರುವ ಆಭರಣಗಳು ಜೋಯಾಲುಕ್ಕಾಸ್‌ನ ಎಲ್ಲ ಮಳಿಗೆಗಳಲ್ಲಿ ಲಭ್ಯ. ಬೆಂಗಳೂರಿನ ಜನರು ಹೊಸ ಫ್ಯಾಷನ್ ಅನ್ನು ಸ್ವೀಕರಿಸುತ್ತಾರೆ’ ಎಂದು ಹೇಳಿದರು.
ನಟಿ ಮಾಳವಿಕಾ ಶರ್ಮಾ ಮಾತನಾಡಿ, ‘ಸಾಂಪ್ರದಾಯಿಕ ಶೈಲಿ ಮತ್ತು ವಿನ್ಯಾಸದ ವಜ್ರಾಭರಣಗಳು ಆಕರ್ಷಕವಾಗಿದ್ದು, ನಾನು ಅಭಿಮಾನಿಯಾಗಿದ್ದೇನೆ. ಈ ಆಭರಣಗಳು ಗ್ರಾಹಕರಿಗೆ ಇಷ್ಟವಾಗಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.