ADVERTISEMENT

ಪುಸ್ತಕಗಳಿಗೆ ರಿಯಾಯಿತಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:41 IST
Last Updated 27 ನವೆಂಬರ್ 2020, 21:41 IST

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕಗಳಿಗೆ ಘೋಷಿಸಲಾಗಿದ್ದ ರಿಯಾಯಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹಾಗೂ ಸಪ್ನ ಬುಕ್‌ ಹೌಸ್ ವಿಸ್ತರಿಸಿವೆ.

ಕಸಾಪ ತನ್ನ ಪ್ರಕಟಣೆಗಳಿಗೆ ಶೇ 10ರಿಂದ ಶೇ 75ರವರೆಗೆ ರಿಯಾಯಿತಿ ನೀಡುತ್ತಿದ್ದು, ಈ ಕೊಡುಗೆಯನ್ನು ಡಿ.15ರವರೆಗೆ ವಿಸ್ತರಿಸಿದೆ. ಪರಿಷತ್ತಿನ ಪುಸ್ತಕ ಮಳಿಗೆಯು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರಲಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಕೆ. ರಾಜ್‌ಕುಮಾರ್ ತಿಳಿಸಿದ್ದಾರೆ.

ಸಪ್ನ ಬುಕ್‌ ಹೌಸ್ ಕನ್ನಡ ಪುಸ್ತಕಗಳಿಗೆ ಶೇ 10ರಿಂದ ಶೇ 20ರವರೆಗೆ ರಿಯಾಯಿತಿ ನೀಡುತ್ತಿದೆ. ₹ 200 ಮೇಲ್ಪಟ್ಟ ಖರೀದಿಗೆ ಸದಸ್ಯತ್ವ ಕಾರ್ಡ್‌ ವಿತರಿಸಲಾಗುತ್ತಿದೆ. ಈ ಕಾರ್ಡ್‌ ಹೊಂದಿದ್ದವರಿಗೆ ವರ್ಷಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಲಾಗುತ್ತಿರುವ ರಿಯಾಯಿತಿ ಕೊಡುಗೆಯನ್ನು ಡಿ.13ರವರೆಗೆ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.