ADVERTISEMENT

COVID 19: ಐಟಿಸಿಯಿಂದ ವೃದ್ಧರು, ಮಕ್ಕಳಿಗಾಗಿ ಆಹಾರದ ಪೊಟ್ಟಣಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 9:14 IST
Last Updated 8 ಏಪ್ರಿಲ್ 2020, 9:14 IST

ಬೆಂಗಳೂರು: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಮನೆಮನೆಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಅನುಕೂಲ ಕಲ್ಪಿಸಲು ITC ಕಂಪನಿಯು ತನ್ನ 'ಆಶೀರ್ವಾದ್ ಬಾಕ್ಸ್ ಆಫ್ ಹೋಪ್' ಮತ್ತು 'ಸನ್‍ಫೀಸ್ಟ್ ಬಾಕ್ಸ್ ಆಫ್‍ ಹ್ಯಾಪಿನೆಸ್'ಗಳ ಮೂಲಕ ದೇಶದಾದ್ಯಂತ ಆಹಾರ ಸರಬರಾಜು ಮಾಡುತ್ತಿದೆ. ಕಂಪನಿಯ 150 ಕೋಟಿ ರೂಪಾಯಿಯ ಕೋವಿಡ್‍-19 ತುರ್ತುನಿಧಿಯ ಯೋಜನೆ ಇದಾಗಿದೆ.

ಲಾಕ್‍ಡೌನ್‍ ಪರಿಣಾಮ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಚೈಲ್ಡ್ ರೈಟ್ಸ್ ಆ್ಯಂಡ್ ಯೂ (CRY), SOS ಚಿಲ್ಡ್ರನ್ಸ್ ವಿಲೇಜ್ ಇಂಡಿಯಾ ಮತ್ತು ಇನ್ನೊಂದು ಪ್ರಮುಖ ಎನ್‍ಜಿಒ ಜೊತೆ ಸೇರಿ ಐಟಿಸಿ, ತಿಂಗಳು ಪೂರ್ತಿ ಮಕ್ಕಳು ಮತ್ತು ಹಿರಿಯರಿಗೆ ಅಗತ್ಯವಾಗಿರುವ ಆಹಾರ ಪೂರೈಕೆ ಮಾಡುತ್ತಿದೆ. ಏಪ್ರಿಲ್ ಒಂದರಂದು ಆಯಾ ರಾಜ್ಯಗಳಲ್ಲಿ ಅಲ್ಲಿನ ಪಾಲುದಾರ ಎನ್‍ಜಿಒಗಳ ಸ್ವಯಂಸೇವಕರ ಮೂಲಕ ಆರಂಭವಾಗಿದ್ದು, ಅವರು ಆರೋಗ್ಯ, ಸ್ವಚ್ಛತೆ ಮತ್ತು ಸುರಕ್ಷಾ ಮುಂಜಾಗ್ರತೆಗಳ ಅರಿವು ಮೂಡಿಸುವುದರ ಜೊತೆಗೆ ಈ ಕೆಲಸವನ್ನೂ ಮಾಡುತ್ತಿದ್ದಾರೆ.

ಆಶೀರ್ವಾದ್ ಬಾಕ್ಸ್ ಆಫ್ ಹೋಪ್‍ ಹಿರಿಯರಿಗಾಗಿ ಇದ್ದು, ಅದರಲ್ಲಿ ಆಶೀರ್ವಾದ್‍ ಹಿಟ್ಟು, ಉಪ್ಪು, ಕೆಲವು ಅಗತ್ಯ ಮಸಾಲೆಗಳು ಇದ್ದರೆ, ಸನ್‍ಫೀಸ್ಟ್ ಬಾಕ್ಸ್ ಆಫ್‍ ಹ್ಯಾಪಿನೆಸ್ ಎಂಬುದು ಮಕ್ಕಳಿಗಾಗಿ ಇದೆ. ಅದರಲ್ಲಿ ವಿವಿಧ ಸನ್‍ಫೀಸ್ಟ್ ಬಿಸ್ಕೆಟ್‍ ಪ್ಯಾಕ್‍ಗಳು, ಯಿಪ್ಪೀ! ನೂಡಲ್ಸ್, ಜೆಲಿಮಲ್‌ಗಳು ಬಿ.ನ್ಯಾಚುರಲ್‍ ಜ್ಯೂಸ್‍ ಮತ್ತು ಬಿಂಗೋ ಸ್ನ್ಯಾಕ್ಸ್‌ಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.