ADVERTISEMENT

ಡಿ.ಜೆ.ಹಳ್ಳಿ ಗಲಭೆ ತನಿಖೆ ಎನ್‌ಐಎಗೆ ವಹಿಸಲು ಬಿಜೆಪಿ ಆಗ್ರಹ

ಬಿಜೆಪಿ ಆಗ್ರಹ–ಸತ್ಯಶೋಧನಾ ಸಮಿತಿ ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 19:28 IST
Last Updated 30 ಸೆಪ್ಟೆಂಬರ್ 2020, 19:28 IST
ಶಾಸಕ ಅರವಿಂದ ಲಿಂಬಾವಳಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಬಿಡುಗಡೆ ಮಾಡಿದರು. ಸಂಸದರಾದ ಪಿ.ಸಿ.ಮೋಹನ್ ಮತ್ತು ನಾರಾಯಣಸ್ವಾಮಿ ಇದ್ದರು.
ಶಾಸಕ ಅರವಿಂದ ಲಿಂಬಾವಳಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಬಿಡುಗಡೆ ಮಾಡಿದರು. ಸಂಸದರಾದ ಪಿ.ಸಿ.ಮೋಹನ್ ಮತ್ತು ನಾರಾಯಣಸ್ವಾಮಿ ಇದ್ದರು.   

ಬೆಂಗಳೂರು: ‘ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸಬೇಕು ಮತ್ತು ರಾಜ್ಯದಲ್ಲಿ ಎಸ್‌ಡಿಪಿಐ ಅನ್ನು ನಿಷೇಧಿಸಬೇಕು’ ಎಂದು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ನೀಡಿದೆ.

ಬುಧವಾರ ಈ ವರದಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ‘ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ’ ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿರುವುದು ಸ್ಪಷ್ಟವಾಗಿದೆ. ಗಲಭೆ 2 ರಿಂದ 3 ಗಂಟೆ ಕಾಲ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಗಲಭೆಗೆ ಮೊದಲೇ ಒಡೆಯಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಿರುವ ಮಾರಕಾಸ್ತ್ರಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳಲಾಗಿತ್ತು, ಪೂರ್ವ ನಿಯೋಜಿತ ಎಂಬುದಕ್ಕೆ ಇದು ಸಾಕ್ಷಿ’ ಎಂದು ಕಟೀಲ್‌ ಹೇಳಿದರು.

ADVERTISEMENT

‘ಬಿಬಿಎಂಪಿ ಸದಸ್ಯರಾದ ಅಬ್ದುಲ್‌ ಹಫೀಜ್ ಜಾಫಿ, ಸಂಪತ್‌ ರಾಜ್, ಇರ್ಷಾದ್‌ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈಜೋಡಿಸಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಪಕ್ಷವು ಆಂತರಿಕ ನಾಯಕತ್ವದ ಸಮಸ್ಯೆ ಪರಿಹರಿಸದೇ ಇರುವುದೇ ಗಲಭೆಗೆ ಕಾರಣ’ ಎಂದೂ ಅವರು ಆರೋಪಿಸಿದರು.

‘ಈ ವರದಿಯನ್ನು ನಾಳೆ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು’ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಸತ್ಯಶೋಧನಾ ಸಮಿತಿಯಲ್ಲಿ ಸಂಸದರಾದ ಪಿ.ಸಿ.ಮೋಹನ್, ನಾರಾಯಣಸ್ವಾಮಿ ಅವರು ಸಮಿತಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.