ADVERTISEMENT

ಡಿಎನ್ಎ ಪರೀಕ್ಷೆ: ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 16:01 IST
Last Updated 30 ಡಿಸೆಂಬರ್ 2025, 16:01 IST
   

ಬೆಂಗಳೂರು: ಪ್ರಕರಣವೊಂದರಲ್ಲಿ, 21 ವರ್ಷದ ಮಗಳ ತಂದೆ ಯಾರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

‘ಮಗಳ ಪಿತೃತ್ವದ ಸತ್ಯ ಪತ್ತೆ ಹಚ್ಚಲು ಡಿಎನ್ಎ ಪರೀಕ್ಷೆ ಅಗತ್ಯವಿದೆ’ ಎಂಬ ವಿಜಯಪುರ ಜಿಲ್ಲಾ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಕೋರಿದ್ದ 56 ವರ್ಷದ ಶಿಕ್ಷಕರೊಬ್ಬರ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರ್ಗಿ) ವಜಾಗೊಳಿಸಿದೆ.

‘ವ್ಯಾಜ್ಯ ಪರಿಹರಿಸಲು ಡಿಎನ್‌ಎ ಪರೀಕ್ಷೆ ನಿರ್ಣಾಯಕವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

‘ಪ್ರತಿವಾದಿಯಾಗಿರುವ 46 ವರ್ಷದ ಮಹಿಳೆ ನನ್ನ ಹೆಂಡತಿಯಲ್ಲ ಮತ್ತು ಆಕೆಯ 21 ವರ್ಷದ ಮಗಳಿಗೆ ನಾನು ತಂದೆಯಲ್ಲ’ ಎಂಬ ಅರ್ಜಿದಾರರ ವಾದವನ್ನು ಸೆಷನ್ಸ್ ನ್ಯಾಯಾಲಯ ತಳ್ಳಿ ಹಾಕಿತ್ತು.

ಡಿಎನ್ಎ ಪರೀಕ್ಷೆಗೆ ಕೋರಿದ್ದ ಮಹಿಳೆಯ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ವಿಜಯಪುರ ನ್ಯಾಯಾಲಯ 2025ರ ಜುಲೈ 10ರಂದು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.