ADVERTISEMENT

ನಾಯಿ ಬಾಲಕ್ಕೆ ಪಟಾಕಿ; ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:44 IST
Last Updated 29 ಅಕ್ಟೋಬರ್ 2019, 19:44 IST

ಬೆಂಗಳೂರು: ಯುವಕರ ಗುಂಪೊಂದು ನಾಯಿ ಬಾಲಕ್ಕೆ ಪಟಾಕಿ ಕಟ್ಟಿದ್ದ ಘಟನೆ ನಗರದಲ್ಲಿ ನಡೆದಿದೆ ಎನ್ನಲಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಹರಿದಾಡಿತು.

ನಾಯಿಯೊಂದರ ಬಾಲಕ್ಕೆ ಪಟಾಕಿ ಸರ ಕಟ್ಟಿದ್ದ ಯುವಕರಿಬ್ಬರು, ಆ ಸರಕ್ಕೆ ಬೆಂಕಿ ಹಚ್ಚಿದ್ದರು. ಪಟಾಕಿ ಸಿಡಿಯುತ್ತಲೇ ಹೆದರಿದ ನಾಯಿ ಕೂಗಾಡುತ್ತಲೇ ರಸ್ತೆಯಲ್ಲೆಲ್ಲ ಓಡಾಡಿದೆ. ಈ ದೃಶ್ಯ ವಿಡಿಯೊದಲ್ಲಿದೆ.

ವಿಡಿಯೊವನ್ನು ಶೇರ್ ಮಾಡಿರುವ ಹಲವರು, ಅಮಾನವೀಯವಾಗಿ ನಡೆದುಕೊಂಡಿರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ADVERTISEMENT

ಪೊಲೀಸ್ ಅಧಿಕಾರಿಯೊಬ್ಬರು, ‘ವಿಡಿಯೊ ಪರಿಶೀಲಿಸಲಾಗುತ್ತಿದೆ. ಘಟನೆ ನಡೆದಿರುವ ಸ್ಥಳ ಯಾವುದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.