ADVERTISEMENT

ಮಳೆಯಲ್ಲಿ ಸಿಲುಕಿದ್ದ ನಾಯಿ ಮರಿಗಳ ರಕ್ಷಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:41 IST
Last Updated 17 ಸೆಪ್ಟೆಂಬರ್ 2019, 19:41 IST
ರಕ್ಷಿಸಲಾದ ನಾಯಿ ಮರಿಗಳ ಜೊತೆ ಕಾನ್‌ಸ್ಟೆಬಲ್
ರಕ್ಷಿಸಲಾದ ನಾಯಿ ಮರಿಗಳ ಜೊತೆ ಕಾನ್‌ಸ್ಟೆಬಲ್   

ಬೆಂಗಳೂರು:ಮಳೆಯಲ್ಲಿ ಸಿಲುಕಿ ನರಳುತ್ತಿದ್ದ ನಾಲ್ಕು ದಿನಗಳ ನಾಯಿ ಮರಿಗಳನ್ನು ರಕ್ಷಿಸಿರುವ ಮಡಿವಾಳ ಪೊಲೀಸರು, ಠಾಣೆ ಬಳಿಯೇ ಅವುಗಳಿಗೆ ಆಶ್ರಯ ಕಲ್ಪಿಸಿದ್ದಾರೆ.

‘ಠಾಣೆ ಎದುರಿನ ಮುಖ್ಯ ರಸ್ತೆ ಬದಿಯಲ್ಲಿ ನಾಯಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು’ ಎಂದು ಇನ್‌ಸ್ಪೆಕ್ಟರ್ ಭರತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಡಿವಾಳ ಹಾಗೂ ಸುತ್ತಮುತ್ತ ಮಂಗಳವಾರ ಜೋರಾದ ಮಳೆ ಸುರಿಯಿತು. ಮರಿಗಳು ಮಳೆಯಲ್ಲಿ ಸಿಲುಕಿ ನರಳುತ್ತಿದ್ದವು. ಅವುಗಳ ಆಕ್ರಂದನ ರಸ್ತೆಯಲ್ಲೆಲ್ಲ ಕೇಳಿಸುತ್ತಿತ್ತು. ಸ್ಥಳಕ್ಕೆ ಹೋಗಿದ್ದ ಕಾನ್‌ಸ್ಟೆಬಲ್‌ಗಳು ಮರಿಗಳನ್ನು ಎತ್ತಿಕೊಂಡು ಬಂದು ಆರೈಕೆ ಮಾಡಿದರು’ ಎಂದು ಹೇಳಿದರು.

ADVERTISEMENT

ಪೊಲೀಸರ ಈ ಕೆಲಸಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.