
ಬೆಂಗಳೂರು: ಅಂಗ ನಿರ್ಧರಣಾ ಸಮಿತಿಯ ಸಲಹಾ ಗುಂಪಿನಿಂದ ನೆಪ್ರೊ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ.ಸಿ.ಜಿ.ಶ್ರೀಧರ್ ಅವರನ್ನು ಕೈಬಿಡಲಾಗಿದೆ.
ಆರೋಗ್ಯ ಇಲಾಖೆ ಅಂಗ ನಿರ್ಧರಣಾ ಸಮಿತಿ ರಚಿಸಿ ಈಚೆಗೆ ಆದೇಶ ಹೊರಡಿಸಿತ್ತು. ಏಳು ಅಂಗ ಸಮಿತಿಗೆ ಸಲಹಾ ಗುಂಪು ರಚನೆ ಮಾಡಲಾಗಿತ್ತು. ಅದರಲ್ಲಿ ಮೂತ್ರ ಪಿಂಡ ಸಲಹಾ ಗುಂಪಿನಲ್ಲಿ ನೆಪ್ರೊ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ.ಸಿ.ಜಿ.ಶ್ರೀಧರ್ ಇದ್ದರು.
ನೆಪ್ರೊ ಯುರಾಲಜಿ ಸಂಸ್ಥೆಯ ಸಿ.ಜಿ.ಶ್ರೀಧರ್, ಆರ್.ಕೇಶವ ಮೂರ್ತಿ, ಪ್ರದೀಪ್, ಕಿಶನ್ ಹಾಗೂ ಶ್ರೀನಿವಾಸನ್ ವಿರುದ್ಧ ಡಾ.ಸುಜಾತಾ ಸಿದ್ದಪ್ಪ ಅವರು 2021ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಈ ದೂರು ಆಧರಿಸಿ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿತ್ತು. ವೈದ್ಯರ ವಿರುದ್ಧ ಆರೋಪ ಸಾಬೀತಾಗಿದ್ದು, ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಅಧ್ಯಯನ ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಪಿತ ವೈದ್ಯರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಿದೆ. ಹಾಗಾಗಿ, ಶ್ರೀಧರ್ ಅವರನ್ನು ಕೈಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.