ADVERTISEMENT

ಬೆಮೆಲ್‌ನಿಂದ ಚಾಲಕ ರಹಿತ ಮೆಟ್ರೊ ಬೋಗಿ ಬಿಡುಗಡೆಗೊಳಿಸಿದ ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 20:05 IST
Last Updated 15 ಜನವರಿ 2021, 20:05 IST
ಚಾಲಕರಹಿತ ಮೆಟ್ರೊ ಬೋಗಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾರ್ಯದರ್ಶಿ (ಡಿಪಿ) ರಾಜಕುಮಾರ್, ಬೆಮೆಲ್‌ನ ಮುಖ್ಯಸ್ಥ ಮತ್ತು ಮುಖ್ಯವ್ಯವಸ್ಥಾಪಕ ನಿರ್ದೇಶಕ ದೀಪಕ್‌ಕುಮಾರ್ ಹೋಟ
ಚಾಲಕರಹಿತ ಮೆಟ್ರೊ ಬೋಗಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾರ್ಯದರ್ಶಿ (ಡಿಪಿ) ರಾಜಕುಮಾರ್, ಬೆಮೆಲ್‌ನ ಮುಖ್ಯಸ್ಥ ಮತ್ತು ಮುಖ್ಯವ್ಯವಸ್ಥಾಪಕ ನಿರ್ದೇಶಕ ದೀಪಕ್‌ಕುಮಾರ್ ಹೋಟ   

ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್‌ (ಬೆಮೆಲ್‌) ಕಂಪನಿಯು ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿದ ಚಾಲಕ ರಹಿತ ಮೆಟ್ರೊ ಬೋಗಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಬಿಡುಗಡೆಗೊಳಿಸಿದರು. ಇವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಬೋಗಿಗಳಾಗಿವೆ.

ಬೆಮೆಲ್‌ನ ಬೆಂಗಳೂರು ಘಟಕ ಇದನ್ನು ಅಭಿವೃದ್ಧಿಪಡಿಸಿದ್ದು, ಮುಂಬೈ ಮೆಟ್ರೊ ನಿಗಮಕ್ಕೆ ಇವುಗಳನ್ನು ಕಳುಹಿಸಲಾಗುತ್ತದೆ. ಈ ಬೋಗಿಗಳಿರುವ ಆರು ರೈಲುಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇವುಗಳಲ್ಲಿ 2,280 ಮಂದಿ ಪ್ರಯಾಣಿಸಬಹುದಾಗಿದೆ. ಇದೇ ಬೋಗಿಗಳಲ್ಲಿ ಸೈಕಲ್‌ಗಳನ್ನು ಹೊತ್ತೊಯ್ಯಬಹುದಾಗಿದೆ.

25 ಕೆವಿ ಸಾಮರ್ಥ್ಯದ ವಿದ್ಯುತ್‌ ಸಹಾಯದಿಂದ ಈ ಬೋಗಿಗಳ ರೈಲು ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ.

ADVERTISEMENT

‘ಒಟ್ಟು 576 ಬೋಗಿಗಳನ್ನು (96 ರೈಲು) ಪೂರೈಸುವ ಸಂಬಂಧ ಮುಂಬೈ ಮೆಟ್ರೊ ನಿಗಮದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬೈನಲ್ಲಿ 35 ಕಿ.ಮೀ. ಉದ್ದದ ಎರಡು ಹೊಸ ಮಾರ್ಗಗಳು ಪ್ರಾರಂಭವಾಗಲಿದ್ದು, ಅಲ್ಲಿ ಈ ರೈಲುಗಳು ಸಂಚರಿಸಲಿವೆ. 2024ರ ಜನವರಿಯೊಳಗೆ ಎಲ್ಲ ಬೋಗಿಗಳನ್ನು ಪೂರೈಸುವ ಗುರಿ ಇದೆ’ ಎಂದು ಬೆಮೆಲ್ ಪ್ರಕಟಣೆಯಲ್ಲಿ ಹೇಳಿದೆ.

‘ಇದು ₹12 ಸಾವಿರ ಕೋಟಿ ಮೊತ್ತದ ಒಪ್ಪಂದವಾಗಿದೆ. ದೇಶೀಯ ತಂತ್ರಜ್ಞಾನ ಮತ್ತು ನಿರ್ಮಾಣ ವಲಯಕ್ಕೆ ಸರ್ಕಾರದ ಇನ್ನಷ್ಟು ಪ್ರೋತ್ಸಾಹ ಸಿಗುವ ನಿರೀಕ್ಷೆ ಇದೆ’ ಎಂದೂ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.