ADVERTISEMENT

ಬೆಂಗಳೂರು | ಮಾದಕ ವಸ್ತು ಮಾರಾಟ: ಮೂವರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 16:00 IST
Last Updated 20 ಮಾರ್ಚ್ 2025, 16:00 IST
<div class="paragraphs"><p>ಪ್ರಾಧಿನಿಧಿಕ ಚಿತ್ರ</p></div>

ಪ್ರಾಧಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ಬೆಂಗಳೂರು: ಮಾದಕ ವಸ್ತು ಮಾರಾಟ ಆರೋಪ ಸಾಬೀತಾದ ಕಾರಣ ಮೂವರು ಅಪರಾಧಿಗಳಿಗೆ 14 ವರ್ಷಗಳ ಜೈಲು ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿ ನಗರದ 33ನೇ ಸಿಸಿಎಚ್ ನ್ಯಾಯಾಲಯ ನ್ಯಾಯಾಧೀಶ ವಿಜಯ ದೇವರಾಜ ಅರಸು ಆದೇಶ ಹೊರಡಿಸಿದ್ದಾರೆ.

ADVERTISEMENT

ಜೆ. ಜೆ ನಗರ ನಿವಾಸಿಗಳಾದ ಸೈಯದ್ ಯಾರಬ್, ಶಾಬಾಜ್ ಖಾನ್, ಇ‌ಮ್ರಾನ್ ಪಾಷಾ ಶಿಕ್ಷೆಗೊಳಗಾದವರು. ಬಂಧಿತ ಮತ್ತೊಬ್ಬ ಆರೋಪಿಯ ಸಾಕ್ಷ್ಯಾಧಾರ ಸಿಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ.  

ಗುಡ್ಡದಹಳ್ಳಿ ಮುಖ್ಯರಸ್ತೆಯ ಈದ್ಗಾ ಮೈದಾನದ ಬಳಿ 2023 ಜ.ರಂದು ಸಿಸಿಬಿ ಸಂಘಟಿತ ಅಪರಾಧ ದಳದ ಇನ್‌ಸ್ಪೆಕ್ಟರ್‌ ಎಸ್.ಮಹದೇವಸ್ವಾಮಿ ನೇತೃತ್ವದ ಆರೋಪಿಗಳನ್ನು ಬಂಧಿಸಿತ್ತು. 

ಸೈಯದ್‌, ಶಾಬಾಜ್, ಇಮ್ರಾನ್ ಬಳಿ ಮಾರಾಟಕ್ಕೆ ತಂದಿದ್ದ 1 ಕೆ.ಜಿ. ಗಾಂಜಾ, 22 ಎಲ್‌ಎಸ್‌ಡಿ ಸ್ಟ್ರಿಪ್ಸ್‌, 25 ಗ್ರಾಂ ಮೆಥಾಮಫೆಟಮಿನ್ ಪತ್ತೆಯಾಗಿತ್ತು. ಆರೋಪಿಗಳು ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರ ಸಮೇತ ಎನ್‌ಡಿಪಿಎಸ್‌ ಕಾಯಿದೆ ಅನ್ವಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಲಾಗಿದೆ.

ಸರ್ಕಾರಿ ಅಭಿಯೋಜಕ ಕೆ.ವಿ.ಅಶ್ವತ್ಥನಾರಾಯಣ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.