ADVERTISEMENT

ಬೆಂಗಳೂರು: ₹4 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ

ನೈಜೀರಿಯಾ ಪ್ರಜೆ ಸೆರೆ, ಸಿಸಿಬಿಯ ಮಾದಕ ದ್ರವ್ಯ ದಳದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:31 IST
Last Updated 16 ಮೇ 2025, 16:31 IST
ಆರೋಪಿಯಿಂದ ವಶಕ್ಕೆ ಪಡೆದ ಡ್ರಗ್ಸ್ ಅನ್ನು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಪರಿಶೀಲಿಸಿದರು 
ಆರೋಪಿಯಿಂದ ವಶಕ್ಕೆ ಪಡೆದ ಡ್ರಗ್ಸ್ ಅನ್ನು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಪರಿಶೀಲಿಸಿದರು    

ಬೆಂಗಳೂರು: ಡ್ರಗ್ಸ್‌ ಪೂರೈಸುತ್ತಿದ್ದ ನೈಜೀರಿಯಾದ ಪ್ರಜೆಯನ್ನು ಬಂಧಿಸಿರುವ ಸಿಸಿಬಿಯ ಮಾದಕ ದ್ರವ್ಯ ದಳದ ಸಿಬ್ಬಂದಿ, ಆರೋಪಿಯಿಂದ ₹4 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಡೇನಿಲಯ್ ಬಂಧಿತ ಆರೋಪಿ.

ಬಂಧಿತನಿಂದ ₹4 ಕೋಟಿ ಮೌಲ್ಯದ 2 ಕೆ.ಜಿ. 585 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ದ್ವಿಚಕ್ರ ವಾಹನ, ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

ADVERTISEMENT

ಡೇನಿಯಲ್ ಉದ್ಯಮ ವೀಸಾದಡಿ ಭಾರತಕ್ಕೆ ಬಂದಿದ್ದ. ನೈಜೀರಿಯಾದಿಂದ ಕಳ್ಳ ಸಾಗಣೆ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಂಡಿದ್ದ. ಸೆಕೆಂಡ್ ಹ್ಯಾಂಡ್‌ ಬೈಕ್‌ ಬಳಸಿಕೊಂಡು ಡೀಲರ್‌ಗಳನ್ನು ಭೇಟಿಯಾಗಿ ಡ್ರಗ್ಸ್‌ ಪೂರೈಸುತ್ತಿದ್ದ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಯುತ ನಗರದ ಮನೆಯೊಂದರಲ್ಲಿ ಆರೋಪಿ ವಾಸವಾಗಿದ್ದ. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಎಂದು ಅವರು ಮಾಹಿತಿ ನೀಡಿದರು.

ಮತ್ತೊಬ್ಬ ವಿದೇಶಿ ಪ್ರಜೆ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.