ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ನಾರಾಯಣ ಸ್ಕೂಲ್ಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
10ನೇ ತರಗತಿಯಲ್ಲಿ ಸ್ಪಂದನಾ ಎ.ಎಂ., ಪಾರ್ಥ ಬನ್ಸಾಲ್ ಮತ್ತು ತ್ರಿಶಾ ಘೋಷ್ 500ಕ್ಕೆ 498 ಅಂಕಗಳನ್ನು ಗಳಿಸಿದರೆ, 12ನೇ ತರಗತಿಯಲ್ಲಿ ವಖಿನ್ ಎಸ್. ಮತ್ತು ರೇಯಾನ್ಶ್ ದೇವ್ನಾನಿ 495 ಅಂಕಗಳನ್ನು ಪಡೆದಿದ್ದಾರೆ.
10ನೇ ತರಗತಿಯಲ್ಲಿ 17 ವಿದ್ಯಾರ್ಥಿಗಳು 495ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದರೆ, 111 ವಿದ್ಯಾರ್ಥಿಗಳು 490 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಒಟ್ಟಾರೆ ಉತ್ತೀರ್ಣದ ಪ್ರಮಾಣ ಶೇ 99.6ರಷ್ಟಿದೆ. 12ನೇ ತರಗತಿಯಲ್ಲಿ 17 ವಿದ್ಯಾರ್ಥಿಗಳು 490ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿರುವ ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ. ಸಿಂಧೂರ ನಾರಾಯಣ ಮತ್ತು ಶ್ರೀಮತಿ ಪಿ.ಶರಣಿ ನಾರಾಯಣ, ‘ದಶಕಗಳ ಅನುಭವ ಮತ್ತು ಸಂಶೋಧನೆಯ ಮೂಲಕ ಪರಿಪೂರ್ಣ ಶಿಕ್ಷಣ ಒದಗಿಸುತ್ತಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.