ADVERTISEMENT

ವಿಮರ್ಶಕಿ ತಾರಿಣಿ, ಕಥೆಗಾರ ಮನೋಹರ ಪೈಗೆ ‘ಈ ಹೊತ್ತಿಗೆ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:30 IST
Last Updated 28 ಜನವರಿ 2026, 15:30 IST
<div class="paragraphs"><p>ತಾರಿಣಿ ಶುಭದಾಯಿನಿ,&nbsp;ಮನೋಹರ ಪೈ</p></div>

ತಾರಿಣಿ ಶುಭದಾಯಿನಿ, ಮನೋಹರ ಪೈ

   

ಬೆಂಗಳೂರು: ‘ಈ ಹೊತ್ತಿಗೆ ಟ್ರಸ್ಟ್’ ನೀಡುವ 2026ನೇ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರ ‘ಪೆನಲೊಪಿ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಕಥೆಗಾರ ಎಂ. ಮನೋಹರ ಪೈ ಅವರ ‘ಲಾಧಾಕ್ಲಿಸ್ಣ ಮತ್ತು ಇಂದಿಲಾ ಕ್ಯಾಂಟೀನು’ ಅಪ್ರಕಟಿತ ಕಥಾಸಂಕಲನ ಆಯ್ಕೆಯಾಗಿವೆ. 

ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಒಳಗೊಂಡಿವೆ. ಕಾವ್ಯ ವಿಭಾಗದಲ್ಲಿ ಕವಿ ಆನಂದ ಝುಂಜರವಾಡ ಮತ್ತು ಕಥಾ ವಿಭಾಗದಲ್ಲಿ ಲೇಖಕಿ ಜಯಶ್ರೀ ದೇಶಪಾಂಡೆ ತೀರ್ಪುಗಾರರಾಗಿದ್ದರು.

ADVERTISEMENT

ಚಿತ್ರದುರ್ಗದ ತಾರಿಣಿ ಶುಭದಾಯಿನಿ ಅವರ ಹಲವು ಕವನ ಸಂಕಲನ, ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಕಾರ್ಕಳದ ಮನೋಹರ ಪೈ ಅವರು ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಅವರ ಕಥಾ ಸಂಕಲನ ಮತ್ತು ಕಾದಂಬರಿಗಳು ಪ್ರಕಟವಾಗಿವೆ. 

ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ‘ಈ ಹೊತ್ತಿಗೆ’ಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.