
ಬೆಂಗಳೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಕಣ್ಣಿನ ದೃಷ್ಟಿ ಪರೀಕ್ಷಿಸಲು ಟೈಟಾನ್ ಐ+ ಸಂಸ್ಥೆಯು ‘ಏಕ್ ತಾರಾ ಟೆಸ್ಟ್’ ಶೀರ್ಷಿಕೆಯಡಿ ಪ್ರಾಥಮಿಕ ಪರೀಕ್ಷೆ ಹಮ್ಮಿಕೊಂಡಿದೆ.
ಇದು ಪ್ರಾಚೀನ ಕಣ್ಣಿನ ಪರೀಕ್ಷೆಯಿಂದ ಪ್ರೇರಿತವಾದ, ಕಣ್ಣಿನ ದೃಷ್ಟಿಯನ್ನು ಪರೀಕ್ಷಿಸುವ ಒಂದು ಪ್ರಾಥಮಿಕ ವಿಧಾನವಾಗಿದೆ. ಶತಮಾನಗಳ ಹಿಂದೆ ಸಪ್ತಋಷಿ ನಕ್ಷತ್ರ ಪುಂಜದಲ್ಲಿ ಎರಡು ವಿಭಿನ್ನ ನಕ್ಷತ್ರಗಳಾದ ‘ಅಲ್ಕೋರ್’ ಮತ್ತು ‘ಮಿಜಾರ್’ ಅನ್ನು ಗುರುತಿಸುವ ಸಾಮರ್ಥ್ಯದಿಂದ ಬೇಟೆಗಾರರ ದೃಷ್ಟಿಯನ್ನು ಪರೀಕ್ಷಿಸಲಾಯಿತು. ಎರಡನ್ನೂ ನೋಡಬಲ್ಲವರನ್ನು ತೀಕ್ಷ್ಣ ದೃಷ್ಟಿ ಹೊಂದಿರುವವರು ಎಂದು ಪರಿಗಣಿಸಲಾಗಿತ್ತು. ಇದರಿಂದ ಪ್ರೇರಿತವಾದ ‘ಏಕ್ ತಾರಾ ಪರೀಕ್ಷೆ’ಯು ಕತ್ತಲೆಯಲ್ಲಿ ಹೊಳೆಯುವ ನಕ್ಷತ್ರವನ್ನು ಗುರುತಿಸುವುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
‘ಪ್ರತಿ ಐದು ಮಕ್ಕಳಲ್ಲಿ ಒಬ್ಬರು ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ ಮೂರು ಕೋಟಿಗೂ ಅಧಿಕ ಮಕ್ಕಳು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಪರೀಕ್ಷಾ ಅಭಿಯಾನ ಕೈಗೊಳ್ಳಲಾಗಿದೆ. ಪಾರದರ್ಶಕ ಕಾರ್ಡ್ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಕಾರ್ಡ್‌ಗಳು www.titaneyeplus.comನಲ್ಲಿ ಲಭ್ಯ’ ಎಂದು ಟೈಟಾನ್ ಕಂಪನಿಯ ಕಣ್ಣಿನ ಆರೈಕೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನೀಶ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.