ADVERTISEMENT

ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:49 IST
Last Updated 20 ಫೆಬ್ರುವರಿ 2026, 4:49 IST
ಶೋಭಾ
ಶೋಭಾ   

ನೆಲಮಂಗಲ: ಪಟ್ಟಣದ ಪೇಟೆ ಬೀದಿ ಸಮೀಪದ ಮನೆಯೊಂದಕ್ಕೆ ನುಗ್ಗಿ ವೃದ್ಧೆಯನ್ನು ಕೊಲೆ ಮಾಡಿ, ಆಭರಣಗಳನ್ನು ದೋಚಿದ್ದ ಆರೋಪಿಯನ್ನು, ಬುಧವಾರ ರಾತ್ರಿಯೇ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಶೋಭಾ (68) ಮತ್ತು ಪತಿಯೊಂದಿಗೆ ವಾಸವಿದ್ದರು. ಪತಿಗೆ ಕೈಕಾಲುಗಳು ಸ್ವಾಧೀನ ಇರಲಿಲ್ಲ. ಬುದ್ಧಿಮಾಂದ್ಯ ಕಾಯಿಲೆಯಿಂದ ನರಳುತ್ತಿದ್ದರು. ಬುಧವಾರ ಸಂಜೆ ಆರೋಪಿ ಕೊಲೆ ಮಾಡಿದ್ದ, ಆಭರಣ ದೋಚಿದ್ದ.

ಕೊಲೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ‍ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು. ಸ್ಥಳೀಯರೆ ಕೃತ್ಯ ಎಸಗಿದ್ದಾರೆ ಎಂದು ಅಂದಾಜಿಸಿದ ಪೊಲೀಸರು ಪೇಟೆಬೀದಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಆರೋಪಿ ಶಿವಕುಮಾರ್‌(43) ಅವರನ್ನು ಬುಧವಾರ ರಾತ್ರಿ ಅವರ ಮನೆಯಲ್ಲಿ ಬಂಧಿಸಿದ್ದಾರೆ.

ADVERTISEMENT

‘ವಿಪರೀತ ಸಾಲದಿಂದ ಕೊಲೆ ಮಾಡಿ, ಆಭರಣ ದೋಚಿದ್ದಾನೆ ಎಂದು ತಿಳಿದುಬಂದಿದೆ’ ಎಂದು ಪೊಲೀಸರು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ ಭರತ್‌ಗೌಡ, ಎಎಸ್‌ಐ ರಘು, ಕಾನ್‌ಸ್ಟೆಬಲ್‌  ಬಸವರಾಜು, ಚನ್ನೇಗೌಡ ಭಾಗವಹಿಸಿದ್ದರು.

ಶಿವಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.