ADVERTISEMENT

‘ಜಿಡಿಪಿಯ ಶೇ 6ರಷ್ಟು ಶಿಕ್ಷಣಕ್ಕೆ ಮೀಸಲಿಡಿ’

ರಾಜಕೀಯ ಪಕ್ಷಗಳಿಂದ ವಾಗ್ದಾನ ಬಯಸಿದ ‘ಪಾಫ್ರೆ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 19:42 IST
Last Updated 25 ಮಾರ್ಚ್ 2019, 19:42 IST

ಬೆಂಗಳೂರು: ‘ಶಿಕ್ಷಣ ಆಯೋಗದ ಶಿಫಾರಸಿನಂತೆ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇಕಡ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲು ಮತ್ತು ಹಿಂದಿನಿಂದ ಶಿಕ್ಷಣದ ಹೂಡಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿದೂಗಿಸಿಕೊಡಲು ನಮ್ಮ ಪಕ್ಷ ಬದ್ಧವಾಗಿರುತ್ತದೆ’

‘ಶಿಕ್ಷಣ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ’ (ಪಾಫ್ರೆ) ಸಂಘಟನೆ ರಾಜಕೀಯ ಪಕ್ಷಗಳಿಂದ ಬಯಸುತ್ತಿರುವ ವಾಗ್ದಾನವಿದು.

‘ಶಿಕ್ಷಣದ ವಾಣಿಜ್ಯೀಕರಣಕ್ಕೆ ತಡೆ ಒಡ್ಡಬೇಕು ಮತ್ತು ಖಾಸಗಿ ಶಾಲೆಗಳ ಹೊಣೆಗಾರಿಕೆ ಜಾರಿಗೆ ಕಾನೂನಾತ್ಮಕ ಚೌಕಟ್ಟುಗಳನ್ನು ರೂಪಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.