
ಬೆಂಗಳೂರು: ವಿದ್ಯುತ್ ಕ್ಷೇತ್ರದ ಖಾಸಗೀಕರಣ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ನಿಲ್ಲಿಸುವಂತೆ ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶದಲ್ಲಿ ಸರ್ಕಾರವನ್ನು ಆಗ್ರಹಿಸಲಾಯಿತು.
ನಗರದಲ್ಲಿ ಭಾನುವಾರ ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ (ಎಐಇಸಿಎ) ಆಯೋಜಿಸಿದ್ದ ಸಮಾವೇಶದಲ್ಲಿ ಟೈಮ್ ಆಫ್ ಡೇ ಸುಂಕವನ್ನು ಕೈ ಬಿಡಬೇಕು ಹಾಗೂ ರಾಜ್ಯದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆ ಮೇಲು ತೆರಿಗೆ ಮತ್ತು ಸ್ಥಿರ ದರ ಏರಿಕೆ ವಾಪಸ್ ಪಡೆಯುವುದು ಸೇರಿ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಎಐಇಸಿಎ ಅಧ್ಯಕ್ಷ ಸ್ವಪನ್ ಘೋಷ್, ‘ವಿದ್ಯುತ್ ಕ್ಷೇತ್ರವು ಈಗ ಸಂಪೂರ್ಣ ಖಾಸಗೀಕರಣವಾಗುತ್ತಿದೆ. ಈ ಜನವಿರೋಧಿ ನೀತಿಯ ವಿರುದ್ಧ ದೇಶದಾದ್ಯಂತ ಬಳಕೆದಾರರೆಲ್ಲರೂ ಚಳುವಳಿ ಪ್ರಾರಂಭಿಸಬೇಕು’ ಎಂದು ಕರೆ ನೀಡಿದರು.
ಸಾಮಾಜಿಕ ಹೋರಾಟಗಾರ ಎಂ.ಜಿ.ದೇವಸಹಾಯಂ ಹಾಗೂ ಎಐಇಸಿಎ ಸಲಹೆಗಾರ ಎಸ್. ಗಾಂಧಿ ಮಾತನಾಡಿದರು. ಜೆಪಿಎಸ್ ರಾಜ್ಯ ಉಪಾಧ್ಯಕ್ಷ ಬಿ. ದಿಲೀಪನ್, ಎಐಇಸಿಎ ಉಪಾಧ್ಯಕ್ಷ ಕೆ.ಸೋಮಶೇಖರ್, ಖಜಾಂಜಿ ಅಜಯ್ ಚಟರ್ಜಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಭಟ್, ಎಐಕೆಕೆಎಂಎಸ್ ಮುಖಂಡರಾದ ದೀಪಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.