ADVERTISEMENT

ಎಲಿವೇಟೆಡ್‌ ಕಾರಿಡಾರ್‌– ಜನ ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:48 IST
Last Updated 6 ಡಿಸೆಂಬರ್ 2018, 19:48 IST
ಶಾಂತಕುಮಾರ.ಸಿ
ಶಾಂತಕುಮಾರ.ಸಿ   

ಬೆಂಗಳೂರು:ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್‌ ಕಾರಿಡಾರ್‌ ಕುರಿತು ಜನರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಹತ್ವ ಮುಂದೆ ಅರಿವಿಗೆ ಬರಲಿದೆ

ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಭವಿಷ್ಯದಲ್ಲಿ ಸಂಚಾರ ದಟ್ಟಣೆ ತಡೆಗಟ್ಟಲು ಎಲಿವೇಟೆಡ್‌ ಕಾರಿಡಾರ್ ಯೋಜನೆ ಅಗತ್ಯ. ಮೆಟ್ರೊ ಯೋಜನೆಯ ಪ್ರಾರಂಭದಲ್ಲಿಯೂ ಇದೇ ರೀತಿವಿರೋಧ ವ್ಯಕ್ತವಾಯಿತು. ಈಗ ಆ ಯೋಜನೆಯ ಮಹತ್ವ ಜನರಿಗೆ ಅರಿವಾಗುತ್ತಿದೆ.

ADVERTISEMENT

-ಶಾಂತಕುಮಾರ ಸಿ.,ಸಂಪಂಗಿರಾಮನಗರ

ಕೈಗಾರಿಕೆಗಳ ವಿಕೇಂದ್ರೀಕರಣ ಮಾಡಿ

ಯೋಜನೆಗೆ ಇಷ್ಟೊಂದು ದೊಡ್ಡ ಖರ್ಚು ಮಾಡುವ ಬದಲು ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ. ಇದರಿಂದ ಆ ಭಾಗದಿಂದ ಲಕ್ಷಾಂತರ ಜನ ಉದ್ಯೋಗ ಅರಸಿ ಬೆಂಗಳೂರಿಗೆ ಬರುವುದು ತಪ್ಪುತ್ತದೆ.

-ಸಿದ್ಧಯ್ಯ ಮಠ, ವಿಜಯಪುರ

ದಟ್ಟಣೆ ನಿವಾರಣೆಗೆ ಯೋಜನೆ ಬೇಕು

‘ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸುವಾಗ ಉಂಟಾಗುವವಾಯುಮಾಲಿನ್ಯ ಹಾಗೂ ಸಂಚಾರ ದಟ್ಟಣೆಯಿಂದ ಪ್ರಯಾಣಿಕರ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದಎಲ್ಲರಿಗೂ ಈ ಯೋಜನೆಯ ಅಗತ್ಯವಿದೆ. ಜೊತೆಗೆರಸ್ತೆ ಪಕ್ಕದಲ್ಲಿ ಮರಗಳನ್ನು ಸಹ ಬೆಳೆಸಬೇಕು.

-ಸು.ಜಗದೀಶ್, ಬನ್ನೇರುಘಟ್ಟ

ಪೆರಿಫೆರಲ್ ವರ್ತುಲ ರಸ್ತೆ ಮಾಡಿ

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ನಗರದೊಳಗಿನ ವಾಹನ ದಟ್ಟಣೆ ಸಮಸ್ಯೆ ನಿವಾರಣೆಯಾಗುವುದಿಲ್ಲ. ಬೆಳೆದು ನಿಂತಿರುವ ನಗರದಲ್ಲಿ ಭೂಸ್ವಾಧೀನ ಹಾಗೂ ರಸ್ತೆ ವಿಸ್ತರಣೆ ಕಷ್ಟ.ಇದರ ಬದಲು, ನಗರದ ಹೊರವಲಯದಲ್ಲಿ ನಿರ್ಮಿಸಲು ಯೋಜಿಸಿರುವ ಪೆರಿಫೆರಲ್ ವರ್ತುಲ ರಸ್ತೆಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲಿ.

-ಗುರುಪ್ರಸಾದ್ ಎಂ.,ರಾವುತ್ತನಹಳ್ಳಿ

ಬಡವರ ಬವಣೆ ಕಡೆ ಗಮನಹರಿಸಲಿ

ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಮೊದಲು ನಗರದ ರಸ್ತೆ ಗುಂಡಿಗಳನ್ನು ಸರಿಪಡಿಸಿ, ಆಗುವ ಅನಾಹುತಗಳನ್ನು ತಪ್ಪಿಸಬೇಕಿದೆ. ಉಳ್ಳವರ ಹಿತಾಸಕ್ತಿಗಳ ಕಡೆಗೆ ಅಷ್ಟೇ ಅಲ್ಲದೆ ಬಡವರ ಬವಣೆಗಳ ಕಡೆಗೂ ಸರ್ಕಾರ
ಗಮನಹರಿಸಬೇಕು.

-ಸಯ್ಯದ್ ಪಾಷ, ಮಲ್ಲೇಶ್ವರ

ಸಾರ್ವಜನಿಕ ಸಾರಿಗೆ ಅಭಿವೃದ್ಧಿಪಡಿಸಿ

ಎಲಿವೇಟೆಡ್‌ ಕಾರಿಡಾರ್ ಯೋಜನೆಯ ಬದಲುಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನ ಹರಿಸಬೇಕು.ಜೊತೆಗೆ ಮೆಟ್ರೊ ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕು. ಆಗ ಪರಿಸರವೂ ಉಳಿಯಲಿದೆ. ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.

-ಅಕ್ಷಿತಾ, ಜಾಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.